ಇನ್ನರ್‌ವ್ಹೀಲ್‌ದಿಂದ ಶಾಲೆಗಳಿಗೆ ಚೇರ್‌ಗಳ ವಿತರಣೆ ಸಹಕಾರ ಮನೋಭಾವದ ಸೇವೆಯಾಗಿದೆ : ಸುಮಾ ಪಾಟೀಲ

Ravi Talawar
ಇನ್ನರ್‌ವ್ಹೀಲ್‌ದಿಂದ ಶಾಲೆಗಳಿಗೆ ಚೇರ್‌ಗಳ ವಿತರಣೆ ಸಹಕಾರ ಮನೋಭಾವದ ಸೇವೆಯಾಗಿದೆ : ಸುಮಾ ಪಾಟೀಲ
WhatsApp Group Join Now
Telegram Group Join Now

ಗದಗ, ಆ.5 : ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿವೃದ್ಧಿಪಡಿಸುವುದೇ ನಮ್ಮ ಪ್ರಯತ್ನವಾಗಿದ್ದು ಅದಕ್ಕಾಗಿ ಸರಕಾರಿ ಶಾಲೆಗಳನ್ನು ದತ್ತುಪಡೆದು ಸಹಕಾರ ಮನೋಭಾವದಿಂದ ಸೇವೆ ಮಾಡಲಾಗುವದು ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಲಿಟರೇಚರ್ ಕಮೀಟಿ ಚೇರಮನ್ ಸುಮಾ ಪಾಟೀಲ ಹೇಳಿದರು.

ಅವರು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ದಿಂದ ದತ್ತು ಪಡೆದ ಶಾಲೆಗಳಾದ ಸರಕಾರಿ ಶಾಲೆ ನಂ. ೬ ಹಾಗೂ ಸರಕಾರಿ ನಂ. ೧೨ರ ವಿದ್ಯಾರ್ಥಿಗಳಿಗೆ ಕ್ಲಬ್‌ದಿಂದ ಚೇರ್‌ಗಳನ್ನು ವಿತರಿಸಿ ಮಾತನಾಡಿದರು. ವರ್ಷಪೂರ್ತಿ ಈ ಶಾಲೆಗಳಲ್ಲಿ ವಿವಿದ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅವರ ಅವಶ್ಯಕತೆಗಳನ್ನು
ಪೂರೈಸಲಾಗುವದು ಎಂದರು.

ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪೂರ ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವು ಇಲ್ಲಿ ಸಿಗುತ್ತಿದ್ದು ಶಾಲೆಗಳೊಂದಿಗೆ ನಾವೂ ಕೈಜೊಡಿಸಬೇಕಾಗಿದೆ ಎಂದರು. ಕ್ಲಬ್‌ನ ಹಿರಿಯರಾದ ಶ್ರೇಯಾ ಪವಾಡಶೆಟ್ಟರ ಹಾಗೂ ರಾಜೇಶ್ವರಿ ಬಳ್ಳಾರಿ ಮಾತನಾಡಿ ಗದಗ ಶಹರದ ಎಲ್ಲ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಸುಂದರವಾಗಿವೆ ಇಲ್ಲಿ ಪ್ರತಿಭೆ ಹಾಗೂ ಗುಣಾತ್ಮಕತೆ ಕಂಡು ಬರುತ್ತಿದೆ. ಇಲ್ಲಿಯ ಮಕ್ಕಳು ಬಡ ಕುಟುಂಬದವರಾಗಿದ್ದು ಅವರ ಶೈಕ್ಷಣಿಕ ನೆರವಿಗೆ ಸಹಾಯ ನೀಡಲಾಗುವದು ಎಂದರು.

ವೇದಿಕೆಯ ಮೇಲೆ ಪ್ರೇಮಾ ಗುಳಗೌಡ್ರ, ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ, ಐಎಸ್‌ಓ ಪುಷ್ಪಾ ಭಂಡಾರಿ ಹಾಗೂ ಮೀನಾಕ್ಷೀ ಕೊರವನವರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಎಚ್.ಆರ್.ಕೋಣಿಮನಿ ಹಾಗೂ ವೀಣಾ ಮುತಾಲಿಕದೇಸಾಯಿ ಮಾತನಾಡಿ ಸಂಘ ಸಂಸ್ಥೆಗಳ ಸಹಾಯ ಸಹಕಾರವು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದರು. ಮಹಾಲಕ್ಷ್ಮೀ ತೊಂಡಿಹಾಳ ಪ್ರಾರ್ಥಿಸಿದರು, ಎಸ್.ಎಂ.ಹಳೇಮನಿ ಸ್ವಾಗತಿಸಿದರು ಎಸ್.ಎಂ.ಕರಡಕಲ್ಲ ನಿರೂಪಿಸಿದರು, ವೈಎಚ್.ಹಡಪದ ಪ್ರಾಸ್ತಾವಿಕವಾಗಿ
ಮಾತನಾಡಿದರು, ಎಸ್.ಎಸ್.ವನಹಳ್ಳಿ ವಂದಿಸಿದರು. ಎಸ್.ಬಿ.ಕಣಕಿ ಹಾಗೂ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article