ಗದಗ 5 : ಶ್ರೀ ಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ಲಿಂಗೈಕ್ಯ ಶ್ರೀ ಸದ್ಗುರು ಮುಕ್ಕಣ್ಣೇಶ್ವರ ಕತು ಗದ್ದುಗೆಗೆ ಅಮವಾಸೆ ನಿಮಿತ್ಯ ದಿನಾಂಕ ೪.೮.೨೦೨೪ ರವಿವಾರ ಬ್ರಾಹ್ಮೀ
ಮುಹೂರ್ತದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಗುರು ಶಂಕರಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಹಾರುದ್ರಾಭಿಷೇಕ ಜರುಗಿತು.
ಶ್ರಾವಣ ಮಾಸದ ನಿಮಿತ್ಯ ಶ್ರೀ ಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ಒಂದು ತಿಂಗಳ ಪರ್ಯಂತ ಶ್ರೀ ಸದ್ಗುರು ಸಿದ್ಧಾರೂಢರ ಚರಿತ್ರೆ ಪಾರಾಯಣ ಕಾರ್ಯಕ್ರಮ ಜರುಗುವುದು ದಿ. ೫-೮-೨೦೨೪ ರಿಂದ ೨-೯-೨೦೨೪ ರ ವರೆಗೆ ಪ್ರತಿದಿನ ಸಾಯಂಕಾಲ ೭.೦೦ ಗಂಟೆಗೆ ಶ್ರೀ ಶಂಕರಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪುರಾಣ ಪಾರಾಯಣ
ಕಾರ್ಯಕ್ರಮ ಜರುಗುವುದು. ಶ್ರೀಯುತ ಎಚ್.ಎಚ್. ಬಾರಕೇರ ನಿವೃತ್ತ ಶಿಕ್ಷಕರು ಪುರಾಣ ಪಾರಾಯಣ ಮಾಡುವರು ಮತ್ತು ಪಂಡಿತ ಶ್ರೀ ವಾಸುದೇವ ಹೂಲಿಯವರು
ಮಹಾಭಾರತ ಪ್ರವಚನ ನಡೆಸಿಕೊಡುವರು. ಪ್ರತಿದಿನ ಶಿವಕೋಟಿ ಜಪ ಜರುಗುವುದು. ಆದ ಕಾರಣ ಮಠದ ಎಲ್ಲ ಸದ್ಭಕ್ತರು ಆಗಮಿಸಿ ಪುರಾಣ ಶ್ರವಣಮಾಡಿ ಸದ್ಗುರುಗಳ
ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.