370ನೇ ವಿಧಿ ರದ್ದುಗೊಳಿಸಿದ ಐದನೇ ವರ್ಷಾಚರಣೆ ಹಿನ್ನೆಲೆ ಇಂದು ಅಮರನಾಥ ಯಾತ್ರೆ ರದ್ದು

Ravi Talawar
370ನೇ ವಿಧಿ ರದ್ದುಗೊಳಿಸಿದ ಐದನೇ ವರ್ಷಾಚರಣೆ ಹಿನ್ನೆಲೆ ಇಂದು ಅಮರನಾಥ ಯಾತ್ರೆ ರದ್ದು
WhatsApp Group Join Now
Telegram Group Join Now

ಜಮ್ಮು: 370ನೇ ವಿಧಿ ರದ್ದುಗೊಳಿಸಿದ ಐದನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಒಂದು ದಿನದ ಮಟ್ಟಿಗೆ ಈ ಯಾತ್ರೆಗೆ ಬ್ರೇಕ್​ ನೀಡಲಾಗಿದ್ದು, ಇಂದು ಭಗವತಿ ನಗರ್​ ಬೇಸ್​ ಕ್ಯಾಂಪ್​ನಿಂದ ಯಾವುದೇ ಯಾತ್ರಾರ್ಥಿಗಳು ಯಾತ್ರೆಗೆ ಪ್ರಯಾಣ ನಡೆಸಲಿಲ್ಲ.

ಈ ವರ್ಷದ ಯಾತ್ರೆಯಲ್ಲಿ ಇಲ್ಲಿಯವರೆಗೆ 4.90 ಲಕ್ಷ ಯಾತ್ರಿಕರು ಹಿಮ ಲಿಂಗದ ದರ್ಶನ ನಡೆಸಿದ್ದಾರೆ. ಇಂದು ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಯಾವುದೇ ಹೊಸ ಬ್ಯಾಚ್​ ಜಮ್ಮು ಮತ್ತು ಕಾಶ್ಮೀರದಿಂದ ಇಂದು ಪ್ರಯಾಣ ನಡೆಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಹಕ್ಕಿನ ವಿಧಿ 370 ಅನ್ನು ರದ್ದು ಮಾಡಿ ಇಂದಿಗೆ ಐದು ವರ್ಷವಾಗಿದೆ. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮ ನಡೆಸಲಾಗಿದ್ದು, ಎಲ್ಲೆಡೆ ಭದ್ರತೆ ಕಲ್ಪಿಸಲಾಗಿದೆ ಎಂದರು.

2019ರ ಆಗಸ್ಟ್​ 5 ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಅನ್ನು ಎರಡು ಕೇಂದ್ರಾಡಳಿ ಪ್ರದೇಶವಾಗಿ ಘೋಷಿಸಿತು.

WhatsApp Group Join Now
Telegram Group Join Now
Share This Article