ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ

Ravi Talawar
ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ
WhatsApp Group Join Now
Telegram Group Join Now

ಮುನವಳ್ಳಿ: ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಅಸಾಂಕ್ರಾಮಿಕ ರೋಗಗಳ ಕುರಿತು, ತಂಬಾಕು ಸೇವನೆಯ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ ಶನಿವಾರ ಜರುಗಿತು.

ಆರೋಗ್ಯ ಶಿಕ್ಷಣಾಧಿಕಾರಿ ಆಯ್.ಆರ್. ಗಂಜಿ ಮಾತನಾಡಿ, ಆಧುನಿಕ ಜೀವನ ಶೈಲಿ ಒತ್ತಡದ ಜೀವನ, ಚಟಗಳು ಅನುವಂಶೀಯತೆಯಿಂದ ಅಸಾಂಕ್ರಾಮಿಕ ರೋಗಗಳಾದ ಬಿಪಿ, ಶುಗರ, ಕ್ಯಾನ್ಸರ, ಹೃದಯಕ್ಕೆ ಸಂಬಂಧಪಟ್ಟಂತ ಕಾಯಿಲೆ, ಕಣ್ಣಿನ ಪೊರೆ, ಕಿಡ್ನಿ, ತೊಂದರೆ ಬರುತ್ತಲಿವೆ, ಇವುಗಳನ್ನು ನಿಯಂತ್ರಿಸಲು ಆಹಾರ ಪದ್ದತಿಯಲ್ಲಿ ಇತಿಮಿತಿ ಚಟಗಳಿಂದ ದೂರ ಇರುವುದು ಜೀವನ ಶೈಲಿಯಲ್ಲಿ ಬದಲಾವಣೆ ವ್ಯಾಯಾಮ ಯೋಗಾಸನ ರೋಗಕ್ಕೆ ಸಂಭಂಧಿಸಿದ ಚಿಕತ್ಸೆಯ ಅವಶ್ಯಕತೆ ಇದೆ ಎಂದರು.

ಡಾ|| ಶಿವನಗೌಡರ ಮಾತನಾಡಿ ತಂಬಾಕು ಉತ್ಪನ್ನಗಳಿಂದ ಮಾನವ ಶರೀರದ ಮೇಲೆ ಅನೇಕ ಸಮಸ್ಯೆಗಳು ಆಗುತ್ತಲಿವೆ ಮೋಜಿಗಾಗಿ ಮಸ್ತಿಗಾಗಿ ಸ್ನೇಹಿತರ ಒತ್ತಡಕ್ಕಾಗಿ ಚಿಂತೆಯನ್ನು ಮರೆಯಲು ಮತ್ತೊಬ್ಬರ ನಟನೆಯನ್ನು ಅನುಕರಣೆ ಮಾಡಲು ಧೂಮಪಾನ ಮಧ್ಯಪಾನಕ್ಕೆ ಇವತ್ತಿನ ಜನರು ಒಳಗಾಗುತ್ತಿದ್ದಾರೆ. ಇದು ನಮ್ಮ ದೇಹದ ಬಾಯಿಯ ಆರೋಗ್ಯ ವಸಡು ಹಲ್ಲು ಗಂಟಲಿನ ಕ್ಯಾನ್ಸರ್‌ದ ಗಂಭೀರ ಸಮಸ್ಯೆಯಾಗಿದೆ ಇದು ಅಲ್ಲದೆ ದೇಹದ ಹೊಟ್ಟೆಯ ಭಾಗದಲ್ಲಿನ ಅಂಗಾಂಗಗಳಿಗೆ ಹಾಗೂ ಶರೀರದ ಇತರೆ ಭಾಗಗಳಿಗೆ ತೊಂದರೆ ಮಾಡುತ್ತಿದ್ದು ಇದನ್ನು ನಿಯಂತ್ರಿಸುವುದು ಅತೀ ಅವಶ್ಯವಾಗಿದೆ ಎಂದರು.

ಅನಿಲ ಗಿಡ್ಡನಂದಿ ಮಾತನಾಡಿ ಪೌರಕಾರ್ಮಿಕರು ಧೂಮ್ರಪಾನ ಮಧ್ಯಪಾನ ಚಟಕ್ಕೆ ಬಲಿಯಾಗದೆ ಆರೋಗ್ಯವಂತರಾಗಿ ಇರಲು ತಿಳಿಸಿದರು,ಡಾ|| ವಸಂತ ಶೀರೂರ, ಮೇಘಾ ಆರ್, ಆಶಾಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿವರ್ಗ ಹಾಗೂ ಇತರರು ಉಪಸ್ಥಿತರಿದ್ದರು. ಎಸ್.ಜಿ.ಗೌಡರ ನಿರೂಪಿಸಿದರು, ಮುತ್ತಣ್ಣ ಪಾಗಾದ ಸ್ವಾಗತಿಸಿ ವಂದಿಸಿದರು.

 

WhatsApp Group Join Now
Telegram Group Join Now
Share This Article