ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಕರವೇ ಕೆ.ಪೊಂಪನಗೌಡ

Ravi Talawar
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಕರವೇ ಕೆ.ಪೊಂಪನಗೌಡ
WhatsApp Group Join Now
Telegram Group Join Now
ಬಳ್ಳಾರಿ.ಆ,03:ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಪಡಿತರ ಚೀಟಿಗಳಿಗೆ ಅಕ್ಕಿಯನ್ನು ವಿತರಣಾ ಮಾಡಿದ ಮರುದಿನವೇ ಪ್ರತಿ ಕೆಜಿಗೆ ಇಂತಿಷ್ಟು ದರಕ್ಕೆ ಕಾಲ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಎಂದು ನಾರಾಯಣ ಗೌಡ್ರು ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೆ.ಪಂಪನಗೌಡ ಆರೋಪಿಸಿದ್ದಾರೆ. ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಪಡಿತಕ ಅಕ್ಕಿಯನ್ನು ಕಾಲ ಸಂತೆಯಾಲಿ ಮಾರಾಟ ಮಾಡುತಿದ್ದು,ಪರಿಣಾಮ ಗ್ರಾಹಕರು ಸದರಿ ಅಕ್ಕಿಯನ್ನು ಉಪಯೋಗಿಸುವುದು ಕಂಡುಬರುತ್ತಿಲ್ಲ,ಈ ವಿಷಯದ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಸಂಭಂದಿಸಿದ ನ್ಯಾಯ ಬೆಲೆ ಅಂಗಡಿಯವರು ಸಹ ಈ ಕೃತ್ಯದಲ್ಲಿ ಶ್ಯಾಮಿಲಾಗಿರುವುದು ಮೇಲ್ನೋಟಕ್ಕೆ  ಕಂಡು ಬರುತ್ತಿದ್ದು,ಹಾಗೂ ಮಧ್ಯವರ್ತಿಗಳು ಅಕ್ಕಿ ಖರೀದಿ ಮಾಡುತ್ತಿರುವ ತಕ್ಕಡಿ ತಂದು ಗ್ರಾಮಗಳಲ್ಲಿ ತೂಕ ಹಾಕಿ ಆಟೋಗಳ ಅಕ್ಕಿ ಸರಬರಾಜು ಮಾಡುತ್ತಿದ್ದ ಅಧಿಕಾರಿಗಳ ಗಮನಕ್ಕೆ ಇದ್ದರೂ ಕ್ಯಾರೆ ಎನ್ನುತಿಲ್ಲ,ಇವರ ಮೇಲೆ ಕ್ರಮ ಜರುಗಿಸಬೇಕು. ಇದರ ಬಗ್ಗೆ ಶೀಘ್ರವಾಗಿ ಕ್ರಮ ಜರುಗಿಸದೇ ಇದ್ದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರತಿಭನೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article