ರನ್ನ ಬೆಳಗಲಿ: ಅ.೨., ಪಟ್ಟಣದ ಸದಾಶಿವ ನಗರದಲ್ಲಿರುವ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ದಂದು ಶಾಲೆಯ ಮುಖ್ಯೋಪಾಧ್ಯಾಯರ ಸೇವಾ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭ ಜರಗಿತು.
ನಿವೃತ್ತ ಮುಖ್ಯೋಪಾಧ್ಯರಾದ ರವೀಂದ್ರ ಕಂಬಾರ ಅವರು ನಿವೃತ್ತಿಯ ನಂತರವೂ ಶಾಲೆಗೆ ಬೋಧಿಸಲು ನಾನು ಬರುವೆ ಶಾಲೆಯ ವಿದ್ಯಾರ್ಥಿ ಬಳಗವ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ. ನಿವೃತ್ತಿ ಎನ್ನುವುದು ಕೇವಲ ನನ್ನ ವಯಸ್ಸಿಗೆ ಮಾತ್ರ ಅನ್ವಯವಾಗುತ್ತದೆ. ನನ್ನಲ್ಲಿರುವ ಜ್ಞಾನವನ್ನು ಮಕ್ಕಳಿಗೆ ನಾನು ಈ ಪುಣ್ಯ ಭೂಮಿಯಲ್ಲಿ ಇರುವವರಿಗೆ ಉಣ ಬಡಿಸುತ್ತೇನೆ. ನನ್ನ
ಸುದೀರ್ಘ ೩೨ ವರ್ಷಗಳ ಕಾಲ ವಿದ್ಯಾರ್ಥಿಯ ಸಮೂಹದಲ್ಲಿ ಶಿಕ್ಷಣ ಕ್ಷೇತ್ರದ ಅನೇಕ ಸ್ಥರದ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಅಧಿಕಾರಿ ಮಹನೀಯರು, ನನ್ನ ಸಿಬ್ಬಂದಿ ಸಹಪಾಠಿಗಳು ಹಾಗೆ ಶಾಲಾ ಅಭಿವೃದ್ಧಿ ಉಸ್ತುವಾರಿ ಸಮಿತಿಯ ಎಲ್ಲಾ ಸದಸ್ಯರು ಬಹಳಷ್ಟು ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.ಈ ಎಲ್ಲಾ ಮಹನೀಯರಿಗೆ ನಾನು ಚಿರಋಣಿ.ರನ್ನ ಬೆಳಗಲಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾನ್ನಾಗಿ ಒಂಬತ್ತು ವರ್ಷಗಳ ಕಾಲ ಸಾಧ್ಯವಾದಷ್ಟು ಶಾಲೆಯ ಬೌದ್ಧಿಕ ಮತ್ತು ಭೌತಿಕ ಅಭಿವೃದ್ಧಿಪಡಿಸಲು ಪರಿಶ್ರಮ ಪಟ್ಟಿದ್ದೇನೆ. ಇದು ಎಲ್ಲರ ಸಹಕಾರದ ಜೊತೆಗೆ ಅದೇ ರೀತಿ ನನ್ನ ನಿವೃತ್ತಿ ನಂತರವೂ ಮಕ್ಕಳೊಂದಿಗೆ ಬೆರೆತು ಪಾಠ ಬೋಧನೆ ಸೇವೆಯಲ್ಲಿ ಮುನ್ನಡೆಯಲು ಅವಕಾಶ ನೀಡಬೇಕೆಂದು ವಿನಂತಿಸುತ್ತೇನೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಬಶೆಟ್ಟಿ ಅವರು ರವೀಂದ್ರ ಕಂಬಾರ ಗುರುಗಳು ಉತ್ತಮ ವಿಜ್ಞಾನ ಸಂಪನ್ಮೂಲ ಶಿಕ್ಷಕರಾಗಿ, ಚಿತ್ರ ಕಲಾವಿದರಾಗಿ, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಮನ ಶಾಸ್ತ್ರಜ್ಞರಾಗಿ ವಿದ್ಯಾರ್ಥಿಗಳಿಗೆ ಪ್ರೀತಿಯ ಭೋದಕರಾಗಿ ಎಲ್ಲರ ಗಮನವನ್ನು ಸೆಳೆಯುವುದರ ಜೊತೆಗೆ ಮಹಾಮಾರಿ ಕರೊನಾ ಹೆಮ್ಮಾರಿಯ ಸಮಯದಲ್ಲೂ ಕೂಡ ತಮ್ಮ ಪ್ರಾಣವನ್ನೇ ಲೆಕ್ಕಿಸಿದೆ ಶಾಲೆಯನ್ನು ಸ್ವತಃ ಕುಂಚಗಳ ಸಹಾಯದಿಂದ ತಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರ ಸಯೋಗದಲ್ಲಿ ಅತ್ಯುತ್ತಮ ರೀತಿಯಲ್ಲಿ ಚಿತ್ರಗಳನ್ನೂ ಬಿಡಿಸಿ ಶಾಲೆಯನ್ನು ಸಿಂಗರಿಸಿದ್ದಾರೆ. ಶಾಲೆಯ ಬಗ್ಗೆ ಅತಿವ ವಾದಂತಹ ಆಸಕ್ತಿ ತಮ್ಮ ವೃತ್ತಿಯ ಬಗ್ಗೆ ಇರುವ ಅಚಲ ಭಕ್ತಿಯಲ್ಲಿ ಇರತಕ್ಕಂತ ಶಿಕ್ಷಕರನ್ನ ಪ್ರಸ್ತುತ ದಿನಗಳಲ್ಲಿ ಕಾಣುವುದು ಬಹಳ ವಿರಳವಾಗಿದೆ ಎಂದು ತಿಳಿಸುವುದರೊಂದಿಗೆ ಅವರ ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಕುರಿತು ಎಮ್.ವಿ.ಮುರಗೋಡ, ಮಲ್ಲಿಕಾರ್ಜುನ ಅರಬಿ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರೀಶ ಸಂಕ್ರಟ್ಟಿ ವಹಿಸಿದರು. ಈಶ್ವರ ಕ್ವಾನ್ಯಾಗೋಳ,
ಹಂಚಿನಾಳ, ಸತ್ತಿಗೇರಿ, ಭಜಂತ್ರಿ, ಬಿಜಾಪುರ, ಬಸವರಾಜ ಕೊಣ್ಣೂರ, ವಿ ಜಿ ಹೊಡೇದಮಣಿ, ಕೃಷ್ಣಪ್ಪ ಹಾರೂಗೇರಿ, ಮಹಾಲಿಂಗಪ್ಪ ಶೇಗುಣಸಿ, ರಾಜೇಸಾಬ ತೇರದಾಳ, ವಿ.ಎಮ್ ಮೂಡಮೆಗೇರಿ, ಎಸ್.ಎಮ್. ನಾರಾ, ಮುರಿಗೆಪ್ಪ ಧಡೂತಿ, ಅಪ್ಪನಗೌಡ ಪಾಟೀಲ, ಯಮನಪ್ಪ ಚಂದಪ್ಪನವರ, ಸದಾಶಿವ ಪುರಾಣಿಕ, ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿವೃತ್ತಿ ಪಡೆದ ರವೀಂದ್ರ ಹನುಮಂತಪ್ಪ ಕಂಬಾರ ಅವರೊಂದಿಗೆ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡ ದ್ವಿತೀಯ ದರ್ಜೆ ಸಹಾಯಕರಾದ ಶೇಖರ ಬಾಗೇವಾಡಿ ,ಶಿಕ್ಷಕರಾದ ಎಮ್. ವಿ. ಕುಲಕರ್ಣಿ, ಎಮ್.ಎಸ್ ಕಲ್ಯಾಣಿ ರವರಿಗೆ ಸನ್ಮಾನಿಸಿ ಬಿಳ್ಕೊಟ್ಟರು.
ಕಾರ್ಯಕ್ರಮವನ್ನ ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಚೋಪಡೆ ನಿರೂಪಿಸಿದರು, ತಾಲೂಕಿನ ಎಲ್ಲಾ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು,
ತಾಲೂಕಾ ಶಿಕ್ಷಣ ಇಲಾಖೆಯ ಅಧಿಕಾರಗಳ ವೃಂದ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.