ಸ್ವಯಂ ಉದ್ಯೋಗ ತರಬೇತಿಗಳು ಕುಟುಂಬಕ್ಕೆ ಭದ್ರತೆ ನೀಡುತ್ತವೆ: ರಾಜು.ಎಸ್.ಆಚಾರ್ಯ

Ravi Talawar
ಸ್ವಯಂ ಉದ್ಯೋಗ ತರಬೇತಿಗಳು ಕುಟುಂಬಕ್ಕೆ ಭದ್ರತೆ ನೀಡುತ್ತವೆ: ರಾಜು.ಎಸ್.ಆಚಾರ್ಯ
WhatsApp Group Join Now
Telegram Group Join Now

ರನ್ನ ಬೆಳಗಲಿ: ಅ: ಪಟ್ಟಣದ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬುಧವಾರ ದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಮುಧೋಳ ಆಶ್ರಯದಲ್ಲಿ ತಾಲೂಕಿನ ಶೀರೊಳ ವಲಯದ ರನ್ನ ಬೆಳಗಲಿ ಕಾರ್ಯಕ್ಷೇತ್ರದ ನವಶಕ್ತಿ ಕೇಂದ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಪ್ರಯುಕ್ತ ಉಚಿತ ಹೊಲಿಗೆ ತರಬೇತಿಯ ಉದ್ಘಾಟನಾ ಸಮಾರಂಭ ಜರುಗಿತು.

ಸಂಘದ ತಾಲೂಕಾ ಯೋಜನಾಧಿಕಾರಿಗಳಾದ ರಾಜು.ಎಸ್.ಆಚಾರ್ಯ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ,ಸ್ವಯಂ ಉದ್ಯೋಗ ತರಬೇತಿಗಳು ಕುಟುಂಬಕ್ಕೆ ಭದ್ರತೆ ನೀಡುತ್ತವೆ. ಆದ್ದರಿಂದ ಉಚಿತವಾಗಿ ಜರುಗುತ್ತಿರುವ ಮೂರು ತಿಂಗಳ ಹೊಲಗೆ ತರಬೇತಿಯನ್ನು ಪಡೆದುಕೊಂಡು. ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಸಾಧ್ಯವಾಗುತ್ತದೆ. ನಮ್ಮ ಧರ್ಮಸ್ಥಳ ಸಂಘವು ಅನೇಕ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಅದರೊಂದಿಗೆ ಸ್ವಸಹಾಯ ಗುಂಪುಗಳ ರಚನೆ ಆದರೆ
ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿ ಒಂದು ಕುಟುಂಬಕ್ಕೆ ದೊರೆಯಬಹುದಾದ ಎಲ್ಲಾ ಸರಕಾರಿ ಮತ್ತು ಸಂಘದ ಯೋಜನೆಗಳ ಪರಿಚಯವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ಪ್ರತಿ ಕುಟುಂಬದ ಏಳಿಗೆ ಮತ್ತು ಭದ್ರತೆಗೆ ಮಹಿಳೆಯರೇ ಮುಖ್ಯ ಪಾತ್ರ ವಹಿಸುತ್ತಾಳೆ. ಪ್ರಸ್ತುತ ದೈನಂದಿನ
ಜೀವನದಲ್ಲಿ ಕೇವಲ ಪುರು?ರು ಮಾತ್ರ ದುಡಿದರೆ ಸಾಲದು, ಮಧ್ಯಮ ವರ್ಗದ ಮಹಿಳೆಯರಾದ ತಾವುಗಳು ವಿವಿಧ ಸ್ವಯಂ ಉದ್ಯೋಗ ತರಬೇತಿಗಳನ್ನು ಪಡೆದುಕೊಂಡು ತಾವು ಕೂಡಾ
ಉದ್ಯೋಗವನ್ನು ಕೈಗೊಂಡರೆ ಆರ್ಥಿಕ ಪರಿಸ್ಥಿತಿ ಜೊತೆಗೆ ಕುಟುಂಬಕ್ಕೆ ಎಲ್ಲಾ ಬಗೆ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಸರ್ಕಾರದ ಯೋಜನೆಗಳ ಜೊತೆಗೆ ಶ್ರೀ
ಕ್ಷೇತ್ರ ಧರ್ಮಸ್ಥಳ ಸಂಘವು ಅನೇಕ ಜನಪರ ಕಾರ್ಯಕ್ರಮ ಮಾಡುತ್ತಾ ಪ್ರತಿ ಕುಟುಂಬಕ್ಕೆ ಎಲ್ಲಾ ಕ್ಷೇತ್ರದ ಮಾಹಿತಿ ನೀಡುವುದರ ಜೊತೆಗೆ ಭದ್ರತೆಯನ್ನು ಕೂಡ ಒದಗಿಸುತ್ತಿದೆ ಎಂದು ತಿಳಿಸಿದರು.

ಶ್ರೀ ಮಂಜುನಾಥ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಸುವರ್ಣ ನಂದಿಕೋಲಮಠ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನವಶಕ್ತಿ ಜ್ಞಾನವಿಕಾಸ
ಕೇಂದ್ರದ ಅಧ್ಯಕ್ಷರಾದ ಸುಮಂಗಲ ಮುರನಾಳ ಅಧ್ಯಕ್ಷತೆ ವಹಿಸಿದರು. ವಲಯ ಮೇಲ್ವಿಚಾರಕರಾದ ಮಂಜುನಾಥ ಕನಕಗಿರಿ,ಊರಿನ ಹಿರಿಯರಾದ ಅಲ್ಲಪ್ಪ ಶಂಕ್ರಟ್ಟಿ, ಗಂಗಪ್ಪ
ಬೀಸನಕೊಪ್ಪ, ಪರಪ್ಪ ದೊಡಹಟ್ಟಿ, ಹೊಲಿಗೆ ತರಬೇತಿದಾರರಾದ ಸುಮಾ ಕರಡಿ, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಸಾವಿತ್ರಿ ಜೈನಾಪುರ, ನಾಗಮ್ಮ ಪೂಜೀರಿ,ಸೇವಾ ಕೇಂದ್ರದ ಪ್ರತಿನಿಧಿಯಾದ ಶ್ರೀದೇವಿ ಮಂಟೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ಥಳೀಯ ಧರ್ಮಸ್ಥಳ ಸಂಘದ ಮಹಿಳಾ ಸದಸ್ಯರು ಮತ್ತು ಹೊಲಿಗೆ ತರಬೇತಿಯ ಕಲಿಕಾರ್ಥಿಗಳು ಪಾಲ್ಗೊಂಡಿದ್ದರು.ಸೇವಾ  ಪ್ರತಿನಿಧಿಯಾದ ಸುಧಾ ಜೈನಾಪುರ ಕಾರ್ಯಕ್ರಮಕ್ಕೆ ಸ್ವಾಗತಿಸಿ,ನಿರೂಪಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article