ನೀಟ್​ ಅಕ್ರಮ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದ ಸುಪ್ರೀಂಕೋರ್ಟ್​

Ravi Talawar
ನೀಟ್​ ಅಕ್ರಮ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದ ಸುಪ್ರೀಂಕೋರ್ಟ್​
WhatsApp Group Join Now
Telegram Group Join Now

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಅಂತಿಮ ತೀರ್ಪು ನೀಡಿದೆ. ಎಲ್ಲಾ ಕಕ್ಷಿದಾರರ ವಾದ ಆಲಿಸಿದ ಬಳಿಕ ಇದು ವ್ಯವಸ್ಥಿತ ಉಲ್ಲಂಘನೆಯಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪಾಟ್ನಾ ಹಾಗೂ ಹಜಾರಿಬಾಗ್​ಗೆ ಮಾತ್ರ ಸೀಮಿತವಾಗಿತ್ತು ಹೀಗಾಗಿ ನೀಟ್​ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಆದರೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಇಲ್ಲಿಗೇ ಬಿಡಲು ಸಾಧ್ಯವಿಲ್ಲ, ಹಾಗಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಕೇಂದ್ರ ಈ ವರ್ಷವೇ ಸರಿಪಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್​ ಹೇಳಿದೆ.

ನಾವು ರಚನಾತ್ಮಕ ನ್ಯೂನತೆಗಳ ಬಗ್ಗೆ ಗಮನಹರಿಸಿದ್ದೇವೆ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಗುರುತನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪೇಪರ್ ಸೋರಿಕೆಯನ್ನು ತಡೆಗಟ್ಟಲು ಎಸ್​ಒಪಿ ಸಿದ್ಧಪಡಿಸುವುದು ಸರ್ಕಾರ ಹಾಗೂ ಎನ್​ಟಿಎ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂಕೋರ್ಟ್​ನ ತೀರ್ಪಿನಿಂದ ಯಾರೊಬ್ಬರ ದೂರು ಪರಿಹಾರವಾಗಿಲ್ಲವೆನಿಸಿದರೆ ಅವರು ಹೈಕೋರ್ಟ್​ಗೆ ಹೋಗಬಹುದು. ಪೇಪರ್ ಸೋರಿಕೆ ವ್ಯವಸ್ಥಿತವಾಗಿಲ್ಲ ಎಂಬುದು ನಮ್ಮ ತೀರ್ಮಾನ. ಪೇಪರ್ ಸೋರಿಕೆ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ ಎಂದು ಕೋರ್ಟ್​ ಹೇಳಿದೆ. ನೀಟ್ ಮರುಪರೀಕ್ಷೆಯ ಬೇಡಿಕೆಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

 

WhatsApp Group Join Now
Telegram Group Join Now
Share This Article