ಇಂಟೆಲ್ ತನ್ನ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ!

Ravi Talawar
ಇಂಟೆಲ್ ತನ್ನ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ!
WhatsApp Group Join Now
Telegram Group Join Now

ನವದೆಹಲಿ, ಆಗಸ್ಟ್ 2: ವಿಶ್ವದ ಪ್ರಮುಖ ಚಿಪ್ ತಯಾರಕ ಸಂಸ್ಥೆಯಾದ ಇಂಟೆಲ್ ತನ್ನ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ. ಎನ್​ವಿಡಿಯಾ, ಎಎಂಡಿ ಸಂಸ್ಥೆಗಳಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ಇಂಟೆಲ್ ತನ್ನ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಲೇ ಆಫ್ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಒಟ್ಟು ತನ್ನಲ್ಲಿರುವ 1.2 ಲಕ್ಷ ಉದ್ಯೋಗಿಗಳ ಪೈಕಿ 15,000 ರಿಂದ 18,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಇಂಟೆಲ್ ನಿರ್ಧರಿಸಿದೆ. 2025ರಲ್ಲಿ 10 ಬಿಲಿಯನ್ ಡಾಲರ್ ಹಣವನ್ನು ಉಳಿಸುವ ಗುರಿ ಈ ಸಂಸ್ಥೆಯದ್ದು. ಈ ವಿಚಾರವನ್ನು ಇಂಟೆಲ್ ಕಾರ್ಪೊರೇಶನ್​ನ ಸಿಇಒ ಪ್ಯಾಟ್ ಜೆಲ್​ಸಿಂಗರ್ ನಿನ್ನೆ ಗುರುವಾರ ತಮ್ಮ ಸಿಬ್ಬಂದಿ ವರ್ಗಕ್ಕೆ ಕಳುಹಿಸಿದ ಮೆಮೋದಲ್ಲಿ ತಿಳಿಸಿದ್ದಾರೆ.

ಆಪರೇಟಿಂಗ್ ಅಥವಾ ಕಾರ್ಯಾಚರಣೆ ವೆಚ್ಚ ತೀರಾ ಅಧಿಕವಾಗಿದೆ. ಲಾಭದ ಮಾರ್ಜಿನ್ ಬಹಳ ಕಡಿಮೆ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಹೆಚ್ಚಳವಾಗುತ್ತಿಲ್ಲ ಎಂದು ಸಿಇಒ ಹೇಳಿದ್ದಾರೆ. ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (ಏಪ್ರಿಲ್​ನಿಂದ ಜೂನ್) ಇಂಟೆಲ್ ನಷ್ಟ ಅನುಭವಿಸಿದೆ. 1.6 ಬಿಲಿಯನ್ ಡಾಲರ್​ನಷ್ಟು ನಷ್ಟ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇಂಟೆಲ್ 1.5 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು. ಈ ಎರಡನೇ ಕ್ವಾರ್ಟರ್​ನಲ್ಲಿ ಅದರ ಆದಾಯವೂ ಕಡಿಮೆ ಆಗಿದೆ. ಮೂರನೇ ಕ್ವಾರ್ಟರ್​ನಲ್ಲೂ ಆದಾಯ ಕಡಿಮೆ ಇರಬಹುದು ಎಂದು ಸ್ವತಃ ಇಂಟೆಲ್ ಸಂಸ್ಥೆಯೇ ಅಂದಾಜು ಮಾಡಿದೆ.

ಇದರ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಇಂಟೆಲ್ ಷೇರುಬೆಲೆ ಕುಸಿತ ಕಂಡಿದೆ. ಅದರ ಮಾರುಕಟ್ಟೆ ಬಂಡವಾಳ 24 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಬಹುದು. ಇದೀಗ ವೆಚ್ಚ ಉಳಿತಾಯದ ಭಾಗವಾಗಿ ಲೇ ಆಫ್ ಕ್ರಮ ಕೈಗೊಂಡಿರುವುದರಿಂದ ಷೇರು ಕುಸಿತಕ್ಕೆ ಒಂದಷ್ಟು ವಿರಾಮ ಸಿಗಬಹುದು.

WhatsApp Group Join Now
Telegram Group Join Now
Share This Article