ಬಳ್ಳಾರಿ. ಆ.1 : ಜಿಲ್ಲೆಯ ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಹರಿಜನ ಕಾಲೋನಿಯ ವಸತಿ ರಹಿತ ಫಲಾನುಭವಿಗಳಿಗೆ ಕಳೆದ 15 ದಿನಗಳ ಹಿಂದೆ ಗಣಿಪರಿಸರ ಪುನಶ್ಚೇತನ ನಿಯಮದಡಿಯಲ್ಲಿ ಗಣಿ ಪ್ರದೇಶದ ಗ್ರಾಮವಾದ ಬನ್ನಿಹಟ್ಟಿ ಗ್ರಾಮವು ಆಯ್ಕೆಯಾಗಿದ್ದು ವಸತಿಗಳ ಆಯ್ಕೆಯಾಗಿರುತ್ತದೆ. ಈ ವಸತಿ ಹಂಚಿಕೆ ಪ್ರಕ್ರಿಯೆಯನ್ನು ಸದರಿ ಗ್ರಾಮ ಪಂಚಾಯಿತಿಗೆ ವಹಿಸಲಾಗಿತ್ತು ಆದರೆ ವಸತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ತಾರತಮ್ಯ ನಡೆಯುತ್ತಿದ್ದು ಇದು ಮಾದಿಗ ಸಮಾಜದ ನಿಜವಾದ ಫಲಾನುಭವಿಗಳನ್ನು ಕಡೆಗಣಿಸಿರುವುದು ಖಂಡನೀಯ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ, ಸಂಡೂರು ತಾಲೂಕ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ.
ಇದು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ ಬನ್ನಿಹಟ್ಟಿ ಗ್ರಾಮದಲ್ಲಿ ಸುಮಾರು 30 ರಿಂದ 40 ಮನೆಗಳ ಮಾದಿಗ ಸಮುದಾಯದ ಕೇರಿ ಇದ್ದು ಇದರಲ್ಲಿ ಸುಮಾರು 40ಕ್ಕೆ ಹೆಚ್ಚು ವಸತಿ ರಹಿತ ಕುಟುಂಬಗಳಿದ್ದರೂ ಮಾದಿಗ ಸಮಾಜಕ್ಕೆ ಒಂದೇ ಒಂದು ಫಲಾನುಭವಿಯನ್ನು ಆಯ್ಕೆ ಮಾಡದೆ ಇರುವುದು ಮಾದಿಗ ಸಮುದಾಯವನ್ನೂ ನಿರ್ಲಕ್ಷ್ಯ ಮಾಡಿ ಕಡೆಗಣಿಸಲಾಗುತ್ತಿದೆ, ಇದು ಬಹಳ ಖಂಡನೀಯ ವಿಷಯವಾಗಿದೆ ಇದನ್ನು ಸರಿಪಡಿಸಿ ಮಾದಿಗ ಜನಾಂಗದಲ್ಲಿರುವ ವಸತಿ ರಹಿತ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆಗಳನ್ನು ನೀಡಬೇಕೆಂದು ಎಂದು ದಲಿತ ಸೇನೆಯ ಸಂಡೂರು ತಾಲೂಕು ಅಧ್ಯಕ್ಷರಾದ ರಾಜೇಶ್ ಹೆಗಡೆಯವರು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತಸೇನೆಯ ಜಿಲ್ಲಾಧ್ಯಕ್ಷ ಮುರಳಿ ಕೃಷ್ಣನವರು ಮಾತನಾಡಿ ಕರ್ನಾಟಕ ಪುನಃ ಚೇತನ್ ನಿಗಮದ ಅಡಿಯಲ್ಲಿ ಕೇವಲ ತಮ್ಮ ತಮ್ಮ ಅನುಕೂಲಸ್ತರನ್ನು ಮಾತ್ರ ಆಯ್ಕೆ ಮಾಡಿರುತ್ತಾರೆ, ಇದು ಖಂಡನೀಯ, ಈ ಪ್ರಕ್ರಿಯೆಯಲ್ಲಿ ಮಾದಿಗ ಸಮುದಾಯವನ್ನು ಕಡಿಗಣಿಸಿರುವುದು ದುರಂತ, ಕಾರಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಆದಷ್ಟು ಬೇಗ ಈ ಲೋಪ ದೋಷವನ್ನು ಸರಿಪಡಿಸಿ ನ್ಯಾಯ ಒದಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾ ಕಾರ್ಯದರ್ಶಿಯಾದ ರತ್ನಯ್ಯ, ಸಂಡೂರು ತಾಲೂಕು ಉಪಾಧ್ಯಕ್ಷ ದೇವರಾಜ, ಕಾರ್ಯದರ್ಶಿ ಕಿರಣ್ ಕುಮಾರ್, ಹನುಮಂತ, ಮುಕ್ತಿಯರ್, ಹಾಗೂ ನಿರಾಶ್ರಿತರರಾದ ಮಲ್ಲಮ್ಮ, ಚೌಡಮ್ಮ ತಿಪ್ಪಮ್ಮ, ಈರಮ್ಮ , ಅಂಬಮ್ಮ, ಗಾಳಮ್ಮ, ಗಂಗಮ್ಮ ಸೇರಿದಂತೆ ಇನ್ನೂ ಹಲವರು ಇದ್ದರು.
One attachment • Scanned by Gmail