ಇಂದಿರಾ ಕ್ಯಾಂಟೀನ ಕಾಮಗಾರಿಗೆ ಚಾಲನೆ

Ravi Talawar
ಇಂದಿರಾ ಕ್ಯಾಂಟೀನ ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now

ಮುನವಳ್ಳಿ: ಪಟ್ಟಣದ ಪೊಲೀಸ ಸ್ಟೆಷನ ಆವರಣದಲ್ಲಿ ಇಂದಿರಾ ಕ್ಯಾಂಟೀನ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಬಸಲಾಗುತ್ತಿದೆ, ಸಿದ್ರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅನುಷ್ಠಾನಕ್ಕೆ ತಂದ ಜನಪ್ರಿಯ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ ಸಹ ಒಂದಾಗಿದೆ ಹಸಿವುಮುಕ್ತ ಕರ್ನಾಟಕ ಮಾಡುವುದೇ ಕಾಂಗ್ರೆಸ್ ಪಕ್ಷ ದ್ಯೇಯ ಮಲಪ್ರಭಾ ನದಿಯ ಉಗಮಸ್ಥಾನ ಕಣಕುಂಬಿಯಲ್ಲಿ ಹೆಚ್ಚು ಮಳೆ ಆಗುತ್ತಿರುವುದುರಿಂದ ನೀರಿನ ಒಳಹರಿವು ಹೆಚ್ಚಾಗಿದೆ ಜಲಾಶಯದಿಂದ ೧೨ ರಿಂದ ೧೫ ಸಾವಿರ ಕ್ಯೂಸೆಕ್ ವರೆಗೆ ನೀರು ಹೊರಬಿಡಲಾಗುವುದು ನದಿ ಪಾತ್ರದಲ್ಲಿ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ ಇಂದಿರಾ ಕ್ಯಾಂಟೀನ್ ಯೋಜನೆಯ ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಗೆ ತಂದಿರುವುದು ಸಂತಸದ ಸಂಗತಿ ಒಟ್ಟು ೮೭ ಲಕ್ಷ ರೂ ವೆಚ್ಚದಲ್ಲಿ ಕ್ಯಾಂಟೀನ ನಿರ್ಮಾಣವಾಗಲಿದೆ ಎಂದರು. ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಕಾಂಗ್ರೆಸ್ ಮುಖಂಡರಾದ ಅಂಬರೀಶ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಉಮೇಶ ಬಾಳಿ, ಎಪಿ.ಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಟೋಪೋಜಿ, ಪುರಸಭೆ ಸದಸ್ಯರಾದ ಡಿ.ಡಿ.ಕಿನ್ನೂರಿ, ಪಂಚು ಬಾರಕೇರ, ಸಲೀಂ ಬೆಳವಡಿ, ಬಸವರಾಜ ದೊಡಮನಿ, ಪ್ರಸಾದ ವಿರುಪಯ್ಯನವರಮಠ, ಸಿಂಗಯ್ಯ ಹಿರೇಮಠ, ಅಶೋಕ ಕದಂ, ಚಂದ್ರು ಮುಚ್ಚಂಡಿ ಮುಬಾರಕ ಭೈರಕದಾರ, ನಾಗಪ್ಪ ಕಾಮಣ್ಣವರ, ಕಲ್ಲಪ್ಪ ಕಿತ್ತೂರ, ಕಾಂಗ್ರೆಸ್ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article