ರನ್ನ ಬೆಳಗಲಿ: ಅ.01. ಪಟ್ಟಣದ ಕೋಡಿಹಾಳ ತೋಟದ ನಿವಾಸಿಗಳು,ಭಾರತೀಯ ಜನತಾ ಪಕ್ಷದ ಯುವ ನಾಯಕರಾಗಿ, ನಿರಂತರ ಪಕ್ಷ ಸಂಘಟನೆ ಹಾಗೂ ರೈತರ ಬೆನ್ನೆಲುಬಾಗಿ ಪ್ರತಿಯೊಂದು ಕಾರ್ಯ, ಕಾರ್ಯಯೋಜನೆಯಲ್ಲಿ ಕೈಜೋಡಿಸುತ್ತಾ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಗಣೇಶ ಪೂಜಾರಿ (ಚೋಳಪ್ಪಗೋಳ) ಅವರಿಗೆ ಇತ್ತೀಚಿಗೆ ಭಾರತೀಯ ಜನತಾ ಪಕ್ಷದ ಮುಧೋಳ ತಾಲೂಕಿನ ಗ್ರಾಮೀಣ ಮಂಡಳಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಮತ್ತೆ ಪಕ್ಷದ ಜವಾಬ್ದಾರಿಗಳನ್ನು ನೀಡುವುದರೊಂದಿಗೆ ಮಾಜಿ ಉಪ ಮುಖ್ಯಮಂತ್ರಿಗಳು, ಹಾಲಿ ಚಿತ್ರದುರ್ಗ ಜಿಲ್ಲೆಯ ಲೋಕಸಭೆಯ ಸಂಸದರಾದ ಗೋವಿಂದ. ಎಮ್.ಕಾರಜೋಳ, ಮುಧೋಳ ತಾಲೂಕ
ಭಾಜಪದ ಮುಖಂಡರಾದ ಅರುಣ ಕಾರಜೋಳ, ತಾಲೂಕ ಭಾಜಪ ಅಧ್ಯಕ್ಷರಾದ ಸಂಗನಗೌಡ ಕಾತರಕಿ, ಒಬಿಸಿ ಮೋರ್ಚಾ ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಮಸಗುಪ್ಪಿ,ರಾಜ್ಯ ಮೀನುಗಾರರ ಸಂಚಾಲಕರಾದ ನಾಗಪ್ಪ ಅಂಬಿ, ಹಿರಿಯರಾದ ಎಚ್. ಕೆ.ತುಳಸಿಗೇರಿ ಮತ್ತು ರನ್ನ ಬೆಳಗಲಿಯ ಭಾರತೀಯ ಜನತಾ ಪಕ್ಷದ ಎಲ್ಲಾ ಹಿರಿಯರು, ಯುವ ಭಾಜಪ ಮಿತ್ರರು ಅಭಿನಂದಿಸಿದ್ದಾರೆ.
ಭಾಜಪ ಮುಧೋಳ ಗ್ರಾಮೀಣ ಮೋರ್ಚಾ ಕಾರ್ಯದರ್ಶಿಯಾಗಿ ಗಣೇಶ ಪೂಜಾರಿ ಆಯ್ಕೆ
