ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಮುಡಾ ಹಗರಣ, ಎಸ್ ಸಿ ಮತ್ತು ಎಸ್ ಟಿ ಹಣ ದುರುಪಯೋಗ ವಿರೋಧಿಸಿ ಬಿಜೆಪಿ ಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ನಡೆಯುವ “ಮೈಸೂರು ಚಲೋ” ಪಾದಯಾತ್ರೆ ಕುರಿತು ಬೆಳಗಾವಿ ಭಾರತೀಯ ಜನತಾ ಪಕ್ಷದ ಪೂರ್ವಭಾವಿ ಸಭೆ ಬುಧವಾರದಂದು ಜರುಗಿತು.
ಮಾಜಿ ಶಾಸಕರಾದ ಸಂಜಯ ಪಾಟೀಲ ಮಾತನಾಡಿ ರಾಜ್ಯದ ಕಾಂಗ್ರೆಸ ಸರ್ಕಾರ ಮುಡಾ,ಎಸ್.ಟಿ ನಿಗಮದಂತಹ ಹಗರಣದ ಮುಖಾಂತರ ಸಾವಿರಾರು ಕೋಟಿ ಹಣವನ್ನು ಕೊಳ್ಳೆ ಹೊಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಗರಣಗಳ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಿಸಲು ನಡೆಯಲಿರುವ “ಮೈಸೂರು ಚಲೋ” ಬೃಹತ್ ಪಾದಯಾತ್ರೆ ಆಗಸ್ಟ್ 3 ರಂದು ಬೆಂಗಳೂರಿನಿಂದ ಪ್ರಾರಂಭವಾಗಿ ಆಗಸ್ಟ್ 10 ರಂದು ಮೈಸೂರು ತಲುಪಲಿದೆ. ಆದಕಾರಣ ನಮ್ಮ ಬೆಳಗಾವಿ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾ.ಜ.ಪಾ ಕಾರ್ಯಕರ್ತರು ಸೇರಿ ಭಾಗವಹಿಸಿ ಮೈಸೂರು ಚಲೋ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ ಭ್ರಷ್ಟ ರಾಜ್ಯ ಸರ್ಕಾರದ ಹೋರಾಟದಲ್ಲಿ ಜಿಲ್ಲೆಯಿಂದ ಅತೀ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಜನ ವಿರೋಧಿ ಸರ್ಕಾರದ ವಿರುದ್ದ ಹೋರಾಟ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಡಾ. ಕೆ ವಿ ಪಾಟೀಲ, ಧನಶ್ರೀ ದೇಸಾಯಿ, ರಾಜಶೇಖರ್ ಡೋಣಿ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ ಚೌಗಲೆ,ಪ್ರಮೋದ್ ಕೋಚೇರಿ, ಗುರು ಮೆಟಗುಡ್ಡ,ಸೊನಾಲಿ ಸರ್ನೋಬತ್, ಜಗದೀಶ ಬೂದಿಹಾಳ, ಸಚಿನ್ ಕಡಿ,ಉಮೇಶ್ ಪುರಿ, ಯಲ್ಲೇಶ್ ಕೋಲಕಾರ, ಮಲ್ಲಿಕಾರ್ಜುನ ಮಾದಮ್ಮನವರ,ಸುನಿಲ್ ಮಡ್ಡಿಮನಿ, ಸಂತೋಷ ದೇಶನೂರ,ನಯನಾ ಬಸ್ಮೆ, ಧನಂಜಯ ಜಾಧವ, ಮಹಾದೇವ ಶೆಕ್ಕಿ, ರಾಜೇಂದ್ರ ಗೌಡಪ್ಪಗೋಳ, ಸಂತೋಷ ಹಡಪದ, ಬಾಳೇಶ ಚವ್ವನ್ನವರ್, ವೀರಭದ್ರ ಪೂಜೇರ, ವಿಠ್ಠಲ ಸಾಯಣ್ಣವರ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.