ಹಸಿ ಕಸ ವನ ಕಸ ವಿಂಗಡಣೆಯಿಂದ ಆರೋಗ್ಯಕ್ಕೆ ಒಳ್ಳೆಯದು : ಡಾ. ಕಿರಣ ಮೂಡಲಗಿ 

Ravi Talawar
ಹಸಿ ಕಸ ವನ ಕಸ ವಿಂಗಡಣೆಯಿಂದ ಆರೋಗ್ಯಕ್ಕೆ ಒಳ್ಳೆಯದು : ಡಾ. ಕಿರಣ ಮೂಡಲಗಿ 
WhatsApp Group Join Now
Telegram Group Join Now
ನೇಸರಗಿ: ದಿನನಿತ್ಯ ಬಳಸುವ ವಸ್ತುಗಳಿಂದ ಉಳಿಯುವ ತ್ಯಾಜ್ಯ ವಸ್ತುಗಳಲ್ಲಿ ಹಸಿ ಕಸ ಮತ್ತು ವನ ಕಸಗಳನ್ನು ಪ್ರತೇಕವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವದರಿಂದ ಮನೆ ಸ್ವಚ್ಛತೆ, ಮಕ್ಕಳ ಅರೋಗ್ಯ, ಗಾಳಿ, ನೀರು ಪ್ರಕ್ಷುಬ್ದವಾಗಿರುತ್ತದೆ ಎಂದು ಅರೋಗ್ಯ ಇಲಾಖೆಯ ವೈದ್ಯಧಿಕಾರಿಗಳಾದ ಡಾ. ಕಿರಣ ಮೂಡಲಗಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿ ಸಿ ಟ್ರಸ್ಟ್ ( ರಿ) ಸಹಯೋಗದಲ್ಲಿ ನೇಸರಗಿ   ವಲಯದ ನೇಸರಗಿ  ಬಿ ಕಾರ್ಯಕ್ಷೇತ್ರದಲ್ಲಿ   ಡಾ|| ಡಿ . ವೀರೇಂದ್ರ ಹೆಗ್ಗಡೆಯವರು ಹಾಗೂ  ಡಾ||  ಹೇಮಾವತಿ ವಿ.ಹೆಗ್ಗಡೆಯವರು ಮಾರ್ಗದರ್ಶನದೊಂದಿಗೆ  ಬುಧವಾರದಂದು  ಶ್ರೀ ವೀರಭದ್ರೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ  ಶ್ರಜನಶೀಲ  ಕಾರ್ಯಕ್ರಮದಡಿಯಲ್ಲಿ ಹಸಿ ಕಸ – ಒಣ ಕಸ ವಿಂಗಡಣೆ  ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ  ಉದ್ಘಾಟನೆಯನ್ನು  ಗ್ರಾಮ  ಪಂಚಾಯಿತಿ  ಸದಸ್ಯರಾದ ಶ್ರೀಮತಿ  ದೀಪಾ ಸುರೇಶ. ಅಗಸಿಮನಿ  ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗೌರಮ್ಮ  ಛಲವಾದಿ  ಇವರು ಜ್ಯೋತಿ  ಬೆಳಗಿಸುವುದರ ಮೂಲಕ   ಕಾರ್ಯಕ್ರಮಕ್ಕೆ   ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ  ತಾಲೂಕಿನ  ಜ್ಞಾನ ವಿಕಾಸ ಸಮನ್ವಯಧಿಕಾರಿಯವರಾದ ಶ್ರೀಮತಿ ಶೈಲಾ ಜಕ್ಕಣ್ಣವರ ಮಾತನಾಡಿ  ಜ್ಞಾನ ವಿಕಾಸ ಕೇಂದ್ರದ ಮಹತ್ವ ಕಾರ್ಯಕ್ರಮಗಳ ಪ್ರಯೋಜನ ಸದಸ್ಯರು ಪಡೆದುಕೊಳ್ಳುವ ಬಗ್ಗೆ ಸೃಜನಶೀಲ ಕಾರ್ಯಕ್ರಮದ ಉದ್ದೇಶ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು  , ಸೇವಪ್ರತಿನಿಧಿ, ನಾಗವೇಣಿ,  ಶಾಂತಾ  ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article