ಘೋರ ಗುಡ್ಡ ಕುಸಿತ : ನಿಮ್ಮೊಂದಿಗೆ ನಾವಿದ್ದೇವೆ, ಕೇರಳಕ್ಕೆ ಸಿದ್ದರಾಮಯ್ಯ ಅಭಯ ಹಸ್ತ

Ravi Talawar
ಘೋರ ಗುಡ್ಡ ಕುಸಿತ : ನಿಮ್ಮೊಂದಿಗೆ ನಾವಿದ್ದೇವೆ, ಕೇರಳಕ್ಕೆ ಸಿದ್ದರಾಮಯ್ಯ ಅಭಯ ಹಸ್ತ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 31: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಘೋರ ಗುಡ್ಡ ಕುಸಿತದಲ್ಲಿ  ಹಲವರು ಮೃತಪಟ್ಟಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್​, ಸ್ಥಳೀಯ ಪೊಲೀಸರು ಮತ್ತು ಸೈನ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿ​​ಗೆ ಕರೆ ಮಾಡಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಕ್ಷಣಾ ಕಾರ್ಯಾಚರಣೆಯಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ರಕ್ಷಣಾ ತಂಡ, ಅಗತ್ಯ ಸಾಮಗ್ರಿ ಕಳುಹಿಸಲಾಗುತ್ತಿದೆ ಎಂದು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದುರಂತದಲ್ಲಿ ಸಿಲುಕಿಕೊಂಡವರ ರಕ್ಷಣೆ ಸಂಬಂಧ ಸಚಿವ ಸಂತೋಷ್ ಲಾಡ್ ಅಧಿಕಾರಿಗಳ ಜೊತೆ ವಾಯನಾಡಿಗೆ ತೆರಳುತ್ತಿದ್ದು, ಮಧ್ಯಾಹ್ನದ ವೇಳೆಗೆ ವಾಯನಾಡ್​ಗೆ ತಲುಪಲಿದ್ದಾರೆ. ರೈಲು ದುರಂತದ ವೇಳೆ ಕೂಡ ​ಕನ್ನಡಿಗರ ರಕ್ಷಣೆಗಾಗಿ ಸಂತೋಷ್​ ಲಾಡ್ ಒಡಿಶಾಗೆ ತೆರಳಿದ್ದರು.

ಬೆಂಗಳೂರಿನಲ್ಲಿರುವ ಎನ್​ಡಿಆರ್​ಎಫ್​​ ತಂಡ ಹಾಗೂ ಮದ್ರಾಸ್​ ಎಂಜಿನಿಯರ್​ ಗ್ರೂಪ್​ ಸೇನಾ ಪಡೆಯ ತಂಡಗಳು ಈಗಾಗಲೆ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

 

 

WhatsApp Group Join Now
Telegram Group Join Now
Share This Article