ದೆಹಲಿ, ಜುಲೈ.31: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು ದೀರ್ಘಾವಧಿಯಲ್ಲಿ ಒಂದು ಉಚಿತ ವಿದ್ಯುತ್ ಯೋಜನೆಯಾಗಿದ್ದು, ಈಗಾಗಲೇ 1.3 ಕೋಟಿ ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ವಿವರಿಸಿದ ಸಚಿವರು, ಫೆ.29ರಂದು ಆರಂಭಿಸಿದ ಸೂರ್ಯ ಘರ್ ಯೋಜನೆ ಅನುಷ್ಠಾನ ಕಳೆದೊಂದು ತಿಂಗಳಿಂದ ಚುರುಕಾಗಿದೆ. ಇದು ಬಡವರಿಗೆ ಮತ್ತು ಮಾಧ್ಯಮ ವರ್ಗಕ್ಕೆ ಅತ್ಯುಪಯುಕ್ತ ಯೋಜನೆಯಾಗಿದೆ. ಸೂರ್ಯ ಘರ್ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ವಿಭಾಗಗಳಿಲ್ಲ. ಸೌರಶಕ್ತಿ ಘಟಕ ಸ್ಥಾಪಿಸಲು ಬಯಸುವ ಎಲ್ಲರಿಗೂ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ತ್ವರಿತವಾಗಿ ಜಾರಿಗೆ ತರಲು ಡಿಸ್ಕಾಮ್ ಗಳಿಗೆ ನಿರ್ದೇಶಸಿದ್ದೇವೆ ಎಂದರು