ಚನ್ನಮ್ಮನ ಕಿತ್ತೂರು: ಕಿತ್ತೂರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗುಂಪು ವಿಮೆ ಜಮೆಯಾದ ಪತ್ರವನ್ನು ವಿತರಿಸಿ ಮಾತನಾಡಿದ ಶಾಸಕರಾದ ಬಾಬಾಸಾಹೇಬ ಪಾಟೀಲ ಎಲ್ಲ ಶಿಕ್ಷಕರಿಗೂ ತಿಂಗಳ ಮೊದಲ ದಿನ ಸಂಬಳ ಸಿಗಬೇಕು ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.
ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡುವಲ್ಲಿ ವಿನೂತನ ತಂತ್ರಜ್ಞಾನ ಮೂಲಭೂತ ಸೌಲಭ್ಯಗಳನ್ನು ಒದಿಗಿಸಿ ಸ್ಮಾರ್ಟ ಕ್ಲಾಸ್‌ಗಳನ್ನು ಕೊಡಲಾಗುತ್ತಿದೆ ಇವುಗಳನ್ನು ಉಪಯೋಗಿಸಿ ಗುಣಮಟ್ಟದ ಶಿಕ್ಷಣ ದೊರೆಯುವಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಶಿಕ್ಷಣ ಇಲಾಖೆ ಶ್ರಮಿಸಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ರವೀಂದ್ರ ಹಾದಿಮನಿ ತಾಲೂಕ ಕಾರ್ಯನಿರ್ವಾಹ P,À ಅಧಿಕಾರಿ ಕಿರಣ ಘೋರ್ಪಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ಆಯ್ ತುಬಾಕದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಗಾಯತ್ರಿ ಅಜ್ಜನ್ನವರ ಖಜನಾ ಅಧಿಕಾರಿಗಳಾದ ಚಂದ್ರಶೇಖರ ಶಿಕ್ಷಣ ಸಂಯೋಜಕರಾದ ಮಹೇಶ ಹೆಗಡೆ ಎಸ್ ಎಮ್ ಶಹಪೂರಮಠ ವಿವಿಧ ಸಂಘಗಳ ಪದಾಧಿಕಾರಿಗಳಾದ ವಿ ಎಸ್ ಬರಗಾಲಿ, ಈಶ್ವರ ಉಪರಿ, ಎಮ್ ಎಸ್ ಕಲ್ಮಠ, ಬಿ ಆರ್ ಪಿ ಸಿ ಆರ್ ಪಿ ಗಳು ಹಾಗೂ ಶಿಕ್ಷಕರು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.