ಐಎಎಸ್​ ಕೋಚಿಂಗ್ ನ ಅಕ್ರಮ ಕಟ್ಟಡದ ವಿರುದ್ಧ ಬುಲ್ಡೋಜರ್ ಕ್ರಮ

Ravi Talawar
ಐಎಎಸ್​ ಕೋಚಿಂಗ್ ನ  ಅಕ್ರಮ ಕಟ್ಟಡದ ವಿರುದ್ಧ ಬುಲ್ಡೋಜರ್ ಕ್ರಮ
WhatsApp Group Join Now
Telegram Group Join Now

ದೆಹಲಿಯ ಓಲ್ಡ್​ ರಾಜಿಂದರ್ ನಗರದಲ್ಲಿರುವ ರಾವು ಅವರ ಐಎಎಸ್​ ಕೋಚಿಂಗ್ ಸೆಂಟರ್​ನ ನೆಲಮಾಳಿಗೆಯಲ್ಲಿ ಪ್ರವಾಹದಿಂದಾಗಿ ಮೂವರು ಐಎಎಸ್​ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇನ್ನೂ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರರಕಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಕಟ್ಟಡದ ಮಾಲೀಕ ಅಭಿಷೇಕ್ ಗುಪ್ತಾ ಹಾಗೂ ಕೋಚಿಂಗ್ ಸೆಂಟರ್​ನ ಸಂಯೋಜಕ ದೇಶಪಾಲ್​ ಸಿಂಗ್ ಅವರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ರಾವು ಅವರ ಐಎಎಸ್ ಸ್ಟಡಿ ಸೆಂಟರ್ ಬಳಿಯ ಅತಿಕ್ರಮಣಗಳನ್ನು ತೆಗೆದುಹಾಕಲು ಬುಲ್ಡೋಜರ್ ಕ್ರಮ ಪ್ರಾರಂಭವಾಗಿದೆ

ಕಾರ್ಯಾಚರಣೆಗೆ ದೆಹಲಿ ಪೊಲೀಸರು ಈಗಾಗಲೇ ಅನುಮತಿ ನೀಡಿದ್ದರು. ಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಎಂ.ಹರ್ಷವರ್ಧನ್ ಹೇಳಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದೇವೆ ಮತ್ತು ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ.

ಕಟ್ಟಡದ ವಿವಿಧ ಮಹಡಿಗಳನ್ನು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಕಟ್ಟಡದ ರಚನೆ ಮತ್ತು ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಸ್ಥಳೀಯ ಪುರಸಭೆಯ ಪಾತ್ರವನ್ನು ಪರಿಶೀಲಿಸುತ್ತಿದ್ದಾರೆ.

ದೆಹಲಿ ಅಗ್ನಿಶಾಮಕ ಸೇವೆಯು ಕಟ್ಟಡ ಮತ್ತು ಅದರ ನೆಲಮಾಳಿಗೆಯನ್ನು ಪರಿಶೀಲಿಸುತ್ತಿದೆ, ಇದನ್ನು ಅಕ್ರಮವಾಗಿ ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು. ಈ ಪ್ರದೇಶದ ಒಳಚರಂಡಿ ವ್ಯವಸ್ಥೆ ಕುರಿತು ಪೊಲೀಸರು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಕೋರಿ ನೋಟಿಸ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆ ಹೊತ್ತಿರುವವರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಕಾರ್ಯಾಚರಣೆ ನಡೆಸಲು ದೆಹಲಿ ಪೊಲೀಸರು ಪೂರ್ವಾನುಮತಿ ನೀಡಿದ ನಂತರ ಬುಲ್ಡೋಜರ್‌ಗಳು ಕೋಚಿಂಗ್ ಸೆಂಟರ್ ಬಳಿ ಅತಿಕ್ರಮಣಗಳನ್ನು ತೆಗೆದುಹಾಕುತ್ತಿವೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು, ಕೋಚಿಂಗ್ ಸೆಂಟರ್‌ನಲ್ಲಿ ಸುರಕ್ಷತೆ ಉಲ್ಲಂಘನೆ ಮತ್ತು ಅಕ್ರಮ ಬೇಸ್‌ಮೆಂಟ್ ಕಾರ್ಯಾಚರಣೆಗಳು ಸಾವಿಗೆ ಕಾರಣವಾಗಿವೆ.

WhatsApp Group Join Now
Telegram Group Join Now
Share This Article