ಹುಬ್ಬಳ್ಳಿ: ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಡೆಂಘೀ ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಕರಿಯಪ್ಪಗೌಡ ಹಾಗೂ ಪ್ರೀಯಾ ಪಾಟೀಲ್ ಅವರ ಪುತ್ರಿ ಪೂರ್ಣಾ ಪಾಟೀಲ್ (೫) ಮೃತ ಬಾಲಕಿಯಾಗಿದ್ದಾಳೆ.
ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಇವರ ಇನ್ನೊಬ್ಬ ಮಗನಾದ ಎಂಟು ವರ್ಷದ ಪ್ರಸನಗೌಡ ಪಾಟೀಲ್ ಅವರಿಗೂ ಜ್ವರ ಕಾಣಿಸಿಕೊಂಡಿದ್ದು ಗೋಕುಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಇದುವರೆಗೂ ಡೆಂಘೀ ಬಗ್ಗೆ ಖಚಿತಪಡಿಸಿಲ್ಲ.