ಯೋಧರ ಪ್ರಾಣತ್ಯಾಗ, ಬಲಿದಾನದಿಂದ ನಮ್ಮ ದೇಶ ರಕ್ಷಣೆ : ರೋಹಿಣಿ ಪಾಟೀಲ 

Ravi Talawar
ಯೋಧರ ಪ್ರಾಣತ್ಯಾಗ, ಬಲಿದಾನದಿಂದ ನಮ್ಮ ದೇಶ ರಕ್ಷಣೆ : ರೋಹಿಣಿ ಪಾಟೀಲ 
WhatsApp Group Join Now
Telegram Group Join Now
ನೇಸರಗಿ: ಗಡಿ ಕಾಯುವ ಯೋಧರು ತಮ್ಮ ಕುಟುಂಬದಿಂದ ದೂರ ಉಳಿದು ದೇಶ ರಕ್ಷಣೆಗಾಗಿ ಜೀವದ ಹಂಗು ತೊರೆದು ನಿರಂತರ ಹೋರಾಟ ಮಾಡುವ ಸೈನಿಕರಿಗೆ ನಾವು ಹೆಚ್ಚಿನ ಗೌರವ ಕೊಡುವದು ನಮ್ಮ ಕರ್ತವ್ಯ ಎಂದು ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಹೇಳಿದರು.
ಅವರು ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 25 ನೇ ವರ್ಷದ ಕಾರ್ಗಿಲ್ ವಿಜಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇಸರಗಿ ಪಿ ಎಸ್ ಐ ವಾಯ್ ಎಲ್. ಶೀಗಿಹಳ್ಳಿ ಮಾತನಾಡಿ ನಾನು ಈ ಗ್ರಾಮದ ಹುತಾತ್ಮ  ವೀರ ಯೋಧ ಯಶವಂತ ಕೋಲಕಾರ ನಾನು ಸೇನೆಯ  ಒಂದೇ ಬ್ಯಾಚನಲ್ಲಿ ಸೇವೆ ಸಲ್ಲಿಸುತ್ತಿದ್ದೆವು, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದೆವು ಆದರೆ ಅವರು ಹೋರಾಡಿ ವೀರ ಮರಣ ಹೊಂದಿ ಅಮರನಾದ ಎಂದರು.
ಕಾರ್ಯಕ್ರಮದಲ್ಲಿ  ಗ್ರಾ.ಪಂ ಅಧ್ಯಕ್ಷೆ  ಭಾರತಿ ತಿಗಡಿ, ಗ್ರಾ.ಪಂ ಉಪಾಧ್ಯಕ್ಷ ಕಾಶೀಮ ಜಮಾದಾರ,ಬಸವರಾಜ ಚಿಕ್ಕನಗೌಡರ, ರಾಜು  ಹಣ್ಣಿಕೇರಿ, ರಾಜು ಕಡಕೋಳ, ಮಂಜು ಹೊಸಮನಿ, ಪಕೀರಪ್ಪ ಮೊಖಾಸಿ, ವಿನೋದ ಹೊಸಮನಿ, ರೇಣುಕಾ ಕಡಕೋಳ, ಗೀತಾ ಕಡೆಟ್ಟಿ, ಸೈನಾಜ ನಾಯ್ಕ, ದೀಪಾ ಹೊಗರ್ತಿ, ಸವಿತಾ ಅಕ್ಕೊಳ, ವಿಶಾಲ ಜಂಗಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article