ಯೋಧರ ಸಾಹಸ, ಪರಾಕ್ರಮ, ಪ್ರಾಣತ್ಯಾಗದಿಂದ ಕಾರ್ಗಿಲ್ ಯುದ್ಧ ಗೆಲುವು. ಪಿಎಸ್ಐ ಶೀಗಿಹಳ್ಳಿ 

Ravi Talawar
ಯೋಧರ ಸಾಹಸ, ಪರಾಕ್ರಮ, ಪ್ರಾಣತ್ಯಾಗದಿಂದ ಕಾರ್ಗಿಲ್ ಯುದ್ಧ ಗೆಲುವು. ಪಿಎಸ್ಐ ಶೀಗಿಹಳ್ಳಿ 
WhatsApp Group Join Now
Telegram Group Join Now
ನೇಸರಗಿ. 24 ವರ್ಷಗಳ ಹಿಂದೆ ನಮ್ಮ ಕಾರ್ಗಿಲ್ ನೆಲೆ ಮೇಲೆ ಪಾಕಿಸ್ತಾನ ಸೈನಿಕರು ಯುದ್ಧಕ್ಕೆ ಬಂದಾಗ ಅವರನ್ನು ಹಿಮ್ಮೆಟ್ಟಿಸಿ, ಸದೇಬಡಿದು, ಜೀವದ ಹಂಗು ತೊರೆದು ನಮ್ಮ ಯೋಧರು ತೋರಿದ ಸಾಹಸ, ಪರಾಕ್ರಮ, ನನ್ನ ಕಣ್ಣ ಮುಂದೆ ಇದೆ ಎಂದು  ಪಿಎಸ್ಐ ವಾಯ್ ಎಲ್. ಶೀಗಿಹಳ್ಳಿ ಹೇಳಿದರು.
      ಅವರು ಶುಕ್ರವಾರದಂದು  ಗ್ರಾಮದ ಶ್ರೀ ಚೆನ್ನವೃಷಬೆಂದ್ರ ಅಜ್ಜನವರ ಲೀಲಾಮಠದಲ್ಲಿ  ಮಾಜಿ ಸೈನಿಕರ ಸಂಘ ನೇಸರಗಿ ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದ  25 ನೇ ಕಾರ್ಗಿಲ್ ವಿಜಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಆ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊoಡಿದ್ದೆ ವೀರ ಯೋಧ  ಯಶವಂತ ಕೋಲಕಾರ ನಾನು ಒಂದೇ ಬ್ಯಾಚನಲ್ಲಿ ಸೇವೆ ಮಾಡ್ತಾ ಇದ್ದೆವು ಆ ಯುದ್ಧದ ಸಂದರ್ಭ ನನ್ನ ಕಣ್ಣ ಮುಂದೆ ಇನ್ನೂ ಇದೆ ಮತ್ತು ನನ್ನ ಸ್ನೇಹಿತ ಯಶವಂತ ವೀರಮರಣ ಹೊಂದಿದ ನಾವು ಬದುಕುಳಿದೆವು ಎಂದರು.
     ಈ ಸಂದರ್ಭದಲ್ಲಿ  ನಿವೃತ್ತ ಸೈನಿಕರು ಕಾರ್ಗಿಲ್ ಯುದ್ಧದ ಕುರಿತು ತಮ್ಮ ಅನುಭವ ಹಂಚಿಕೊಂಡರು.ಇದಕ್ಕೂ ಮೊದಲು ಸಂಘದ ಸದಸ್ಯರು ಗ್ರಾಮದ ಕರ್ನಾಟಕ ಚೌಕದಿಂದ ಆರಂಭವಾಗಿ  ಎಲ್ಲ ಬಡಾವಣೆಗಲ್ಲಿ ಸಮವಸ್ತ್ರದೊಂದಿಗೆ ಅಚ್ಚುಕಟ್ಟಾಗಿ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಕಾಡಪ್ಪ ಗಡದವರ, ಮಹಾದೇವ ಹಂಚಿನಮನಿ, ಚನ್ನಪ್ಪ ಡಿನ್ನಮನಿ, ಲಗಮಪ್ಪ ರಾಮನ್ನವರ,  ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ನಿವೃತ್ತ ಸೈನಿಕರು, ಕಾರ್ಯನಿರತ ಸೈನಿಕರು, ಸೈನಿಕರ ಕುಟುಂಬಸ್ಥರು, ಗ್ರಾಮದ ಜನತೆ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article