ಸರಕು ಸಾಗಣೆಯ ಲಾರಿ ಬಾಡಿಗೆಗೆ ಸಂಬಂಧಿಸಿ ಸ್ಪಾಂಜ್ ಐರನ್ ಸಂಘ ಹಾಗು ಸ್ಪಾಂಜ್ ಐರನ್ ಕಾರ್ಖಾನೆ ಮಾಲೀಕರು ಪ್ರತ್ಯುತ್ತರ ನೀಡದ ಹಿನ್ನೆಲೆಯಲ್ಲಿ ಅನಿರ್ಧಷ್ಟಾವಧಿ ಮುಷ್ಕರ ನಡೆಸಲು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ವಿ. ಶ್ರೀನಿವಾಸುಲು ತಿಳಿಸಿದ್ದಾರೆ.
ಲಾರಿ ಬಾಡಿಗೆ ಹೆಚ್ಚಿಸುವ ಬಗ್ಗೆ ಸ್ಪಾಂಜ್ ಐರನ್ ಸಂಘ ಹಾಗು ಸ್ಪಾಂಜ್ ಐರನ್ ಮಾಲೀಕರಿಗೆ ಇದೆ ತಿಂಗಳು 19ರಂದು ಮನವಿ ಪತ್ರ ನೀಡಲಾಗಿತ್ತು ಆದರೆ ಸ್ಪಾಂಜ್ ಐರನ್ ಕಾರ್ಖಾನೆ ಸಂಘ ಹಾಗು ಸ್ಪಾಂಜ್ ಐರನ್ ಕಾರ್ಖಾನೆ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹೀಗಾಗಿ ದಿನಾಂಕ 25 ಗುರುವಾರ ಬೆಳಿಗ್ಗೆಯಿಂದ ಅನಿರ್ಧಷ್ಟಾವಧಿಗೆ ಮುಷ್ಕರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಲಾರಿ ಮಾಲೀಕರ ಸಂಘದ ಕಚೇರಿಯಲ್ಲಿ ಬುಧುವಾರ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಲಾರಿ ಮಾಲಿಕರು ಹಾಜರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ನೆಡೆಯುವ ಮುಷ್ಕರದಲ್ಲಿ ಎಲ್ಲಾ ಲಾರಿ ಮಾಲೀಕರು ಭಾಗವಹಿಸುವಂತೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿ. ಶ್ರೀನಿವಾಸುಲು ಮನವಿ ಮಾಡಿದ್ದಾರೆ.ಮುಷ್ಕರದ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಹಲಕುಂದಿಯ ಬಳಿ ಮುಷ್ಕರ ಆರಂಭ ಆಗಲಿದ್ದು ಲಾರಿ ಮಾಲೀಕರು ಸಮಾವೇಶಗೋಳ್ಳುವಂತೆ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಕೆ.ನೂರ್ ಮುಹಮ್ಮದ್,ಕಾರ್ಯದರ್ಶಿ ಎಂ. ಮಹಬೂಬ್ ಬಾಷಾ,ಸಹ ಕಾರ್ಯದರ್ಶಿ ಪುಜಾದೇವಿ ಶ್ರೀನಿವಾಸ್ ,ಖಜಾಂಚಿ ಟಿ.ಪ್ರವೀಣ್ ಕುಮಾರ್,ಎಂ.ಡಿ.ಫಯಾಜ್,ಚಲ್ಲಾ ರಮೇಶ್,ಡಿ.ರಾಮ್ ಕುಮಾರ್.ಇನ್ನು ಹಲವು ಸದಸ್ಯರು ಉಪಸ್ಥಿತರಿದ್ದರು.