ವಿಜಯನಗರ: ಜಿಲ್ಲೆಯ ಮಹಿಳಾ ಮತ್ರು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹೊಸಪೇಟೆ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಚಿತ್ತವಾಡ್ಗಿ ವಲಯ ೨ ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಯಿತು.
೧೨ ನೇ ವಾರ್ಡ್ ೨ ನೇ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಐದನೆ(೫) ನೇ ಹಂತದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸುಭದ್ರ ದೇವಿ ಶಿಬಿರ ಉದ್ಘಾಟಿಸಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶ ಮಂಡಳಿ ಶಾಲ ಪೂರ್ವ ಶಿಕ್ಷಣ ಮಂಡಳಿ ಸಂಯೋಜಕರಾದ ಕೊಟ್ರೇಶ್, ಮೇಲ್ವಿಚಾರಕಿಯರಾದ ಅನುಪಮ, ಅಂಬುಜ, ಪ್ರಮಿಳಾ ಪಾಟೀಲ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.


