ದುಬೈಯಿಂದ ಬಂದ ವ್ಯಕ್ತಿ ಬ್ಯಾಗ್​​ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್​ಗಳು!

Ravi Talawar
ದುಬೈಯಿಂದ ಬಂದ ವ್ಯಕ್ತಿ  ಬ್ಯಾಗ್​​ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್​ಗಳು!
WhatsApp Group Join Now
Telegram Group Join Now

ಬೆಂಗಳೂರು, ಜುಲೈ 24: ಬೆಂಗಳೂರು ಅಂತರರಾಷ್ಟ್ರೀಯ ವಿಮಾನದಲ್ಲಿ ಸಾಮಾನ್ಯವಾಗಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಅಕ್ರಮವಾಗಿ ಚಿನ್ನ, ಮಾದಕ ವಸ್ತು ಸಾಗಿಸುತ್ತಿದ್ದವರನ್ನು ಕಸ್ಟಮ್ಸ್ ಅಧಿಕಾರಿಗಳು ಹೆಡೆಮುರಿ ಕಟ್ಟುತ್ತಾರೆ. ಆದರೆ ಈ ಬಾರಿ ದುಬೈಯಿಂದ ಬಂದ ವ್ಯಕ್ತಿಯೊಬ್ಬರ ಬ್ಯಾಗ್​​ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್​ಗಳು ದೊರೆತಿವೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ದುಬೈಯಿಂದ ಬಂದ ಪ್ರಯಾಣಿಕ ಕ್ಯಾಬಿನ್ ಬ್ಯಾಗ್​​​ನಲ್ಲಿ ಐಫೋನ್ ಮತ್ತು ಆ್ಯಪಲ್ ವಾಚ್​​​ಗಳನ್ನು ಅಡಗಿಟ್ಟಿಸಿಕೊಂಡು ಬಂದಿದ್ದರು. ಅಕ್ರಮವಾಗಿ ದುಬೈನಿಂದ ಐಪೋನ್​​ಗಳನ್ನ ತಂದು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದರೆಂದು ಆರೋಪಿಸಲಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿವೆ.

2016 ರಿಂದ ನಾಪತ್ತೆಯಾಗಿದ್ದ ರೌಡಿ ಶೀಟರ್​​​ನನ್ನು ಸಿಸಿಬಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯೋಹಾನ ಅಲಿಯಾಸ್ ಪಾಪ ಬಂಧಿತ ರೌಡಿ ಶೀಟರ್ ಆಗಿದ್ದು, ಮೂರು ಪೊಲೀಸ್ ಠಾಣೆಯಲ್ಲಿ ಈತನ ಹೆಸರು ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿ ನಗರ, ಬಾಗಲುಗುಂಟೆ ಠಾಣೆಗಳ ರೌಡಿ ಶೀಟರ್ ಪಟ್ಟಿಯಲ್ಲಿದೆ. ಆರೋಪಿ ವಿರುದ್ಧ ನಗರದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು.

ಯೋಹಾನ ಅಲಿಯಾಸ್ ಪಾಪ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಸಿದ್ಧತೆ ಪ್ರಕರಣ, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ 1 ರಾಬರಿ ಪ್ರಕರಣ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಕೊಲೆ ಪ್ರಕರಣ, ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ 1 ಕೊಲೆ ಪ್ರಕರಣ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 1 ಕೊಲೆ ಯತ್ನ ಪ್ರಕರಣ ದಾಖಲಾಗಿದ್ದವು.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಹಾಗೂ ದರೋಡೆಗೆ ಸಿದ್ಧತೆ ಪ್ರಕರಣ, ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ರಾಬರಿ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು.

 

WhatsApp Group Join Now
Telegram Group Join Now
Share This Article