ಸರ್ವಪಕ್ಷ ಸಭೆಯಲ್ಲಿ ಮತ್ತೆ ವಿಶೇಷ ಸ್ಥಾನಮಾನಕ್ಕೆ ಮೂರು ರಾಜ್ಯಗಳು ಬೇಡಿಕೆ

Ravi Talawar
ಸರ್ವಪಕ್ಷ ಸಭೆಯಲ್ಲಿ ಮತ್ತೆ ವಿಶೇಷ ಸ್ಥಾನಮಾನಕ್ಕೆ ಮೂರು ರಾಜ್ಯಗಳು ಬೇಡಿಕೆ
WhatsApp Group Join Now
Telegram Group Join Now

ಹೊಸದಿಲ್ಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನಕ್ಕೂ ಮುನ್ನ ನಿನ್ನೆ ಸರ್ವಪಕ್ಷ ಸಭೆ ನಡೆದಿದ್ದು, ಮತ್ತೆ ವಿಶೇಷ ಸ್ಥಾನಮಾನಕ್ಕೆ ಮೂರು ರಾಜ್ಯಗಳು ಬೇಡಿಕೆ ಇಟ್ಟಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ನೇತೃತ್ವದಲ್ಲಿ ಸಭೆ ನಡೆದಿದ್ದು, ಜೆಡಿಯು, ವೈಎಸ್‌ಆರ್‌ಪಿ ಮತ್ತು ಬಿಜೆಡಿ ಬಿಹಾರ ಆಂಧ್ರಪ್ರದೇಶ ಮತ್ತು ಒಡಿಶಾಗೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿವೆ.

ಸರ್ವಪಕ್ಷಗಳ ಸಭೆಯಲ್ಲಿ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯು ಆಡಳಿತಾರೂಢ ಎನ್‌ಡಿಎ ಮತ್ತು ಐಎನ್‌ಡಿಐಎಯ ಮಿತ್ರಪಕ್ಷಗಳು ಬೇಡಿಕೆ ಇಟ್ಟಿವೆ. ಬಿಹಾರದ ವಿಶೇಷ ಸ್ಥಾನಮಾನದ ಬಗ್ಗೆ ಜೆಡಿಯುನ ಸಂಜಯ್‌ ಝಾ ಮತ್ತು ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಕೂಡ ಬ್ಯಾಟಿಂಗ್‌ ನಡೆಸಿದ್ದಾರೆ. ಅದರಿಗೆ ಆರ್‌ಜೆಡಿಗೆ ಬೆಂಬಲ ಸೂಚಿಸಿತ್ತು. ಒಂದು ವೇಳೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದೇ ಇದ್ದಲ್ಲಿ ವಿಶೇಷ ಹಣಕಾಸು ನೆರವು ನೀಡಬಹುದು ಎಂದು ಝಾ ಹೇಳಿದ್ದಾರೆ.

ಏತನ್ಮಧ್ಯೆ, ಈ ವಿಷಯದ ಬಗ್ಗೆ ಆಡಳಿತಾರೂಢ ತೆಲುಗು ದೇಶಂ ಪಕ್ಷದ (ಟಿಡಿಪಿ) ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ, ಜೆಡಿಯು ಮತ್ತು ವೈಎಸ್‌ಆರ್‌ಸಿಪಿ ಕ್ರಮವಾಗಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ಕೋರಿದವು ಆದರೆ “ವಿಚಿತ್ರವಾಗಿ” ಟಿಡಿಪಿ ಈ ವಿಷಯದ ಬಗ್ಗೆ ಮೌನವಾಗಿದೆ ಎಂದು ಹೇಳಿದರು.

 

WhatsApp Group Join Now
Telegram Group Join Now
Share This Article