ಇಂಡಿ : ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಸಂಸೋಧನೆ ನಿರಂತರ ನಡೆಯುತ್ತಿದ್ದು ಆ ಸಂಶೋಧನೆಗಳು ರೈತರ ಬೇಡಿಕೆ ಅನುಗುಣವಾಗಿ ನಡೆಯುತ್ತವೆ ಎಂದು ಕೃಷಿ ವಿವಿ ಧಾರವಾಡದ ಗೌರವಾನ್ವಿತ ಕುಲಪತಿಗಳು ಡಾ. ಪಿ.ಎಲ್ ಪಾಟೀಲ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕೃಷಿ ವಿವಿ ಧಾರವಾಡ,ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಶ್ರೀ ಶಿವಯೋಗೀಶ್ವರ ದೇವಸ್ಥಾನ ಸಾಲೋಟಗಿ, ನಿಂಬೆ ಅಭಿವೃದ್ದಿ ಮಂಡಳಿ ಇಂಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇಂಡಿ ಇವರ ಸಹಯೋಗದಲ್ಲಿ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆಗೆ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗೀಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ನಿಂಬೆ ಮತ್ತು ಕಬ್ಬು ಬೆಳೆಗಳ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು.
ಮುಂಗಾರು – ಹಿಂಗಾರು ಮತ್ತು ದೀರ್ಘಾವಧಿ ಬೆಳೆಗಳ ಕುರಿತು ಸಂಶೋಧನೆ ನಡೆಯುತ್ತಿವೆ.
ಬೆಳೆಗಳಿಗೆ ಯಾವ ಹಂತದಲ್ಲಿ ಗೊಬ್ಬರ, ಕೀಟನಾಶಕ,ರೋಗ ನಿವಾರಕ ಕೊಡಬೇಕು ಕುರಿತು ಸಂಶೋಧನೆ ನಡೆಯುತ್ತಿವೆ. ಆ ಎಲ್ಲ ಸಂಶೋಧನೆಗಳ ವಿಚಾರ ಸಂಕೀರಣ ಕೂಡ ನಡೆಯುತ್ತದೆ. ಅವುಗಳನ್ನು ರೈತರಿಗೆ ಪ್ರಾತ್ಯಕ್ಷಿತೆ ಮೂಲಕ ನೀಡಲಾಗುತ್ತದೆ ಎಂದರು.
ರೈತರ ಮಕ್ಕಳಿಗೆ ಎಲ್ಲ ಕೃಷಿ ವಿವಿಗಳಲ್ಲಿ ಶೇ ೫೦ ರಷ್ಟು ಸೀಟು ನೀಡಲಾಗುತ್ತದೆ ಎಂದ ಅವರು ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಉಪಯೋಗ ಮುಖ್ಯ,ಯಾಂತ್ರಿಕರಣದ ಉಪಯೋಗ ಮಾಡಿಕೊಂಡು ಹೊಲಗಳಲ್ಲಿ ಬದುಗಳನ್ನು ನಿರ್ಮಾಣ ಮಾಡಿಕೊಂಡು ನೀರನ್ನು ಇಂಗಿಸಬೇಕಾಗಿದೆ. ನೀರಿನ ಶೇಖರಣೆ ಕಡಿಮೆ ಯಾಗುತ್ತಿದ್ದು ಮಳೆಯ ನೀರನ್ನು ಹೊಲದಿಂದ ಹರಿಯಲು ಬಿಡದೆ ಅದನ್ನು ಉಳಿಸಿ ಕೊಳ್ಳಲು ಪ್ರಯತ್ನ ಮಾಡಬೇಕು, ಜಮೀನಿನ ಫಲವತ್ತತೆ ಉಳಿಸಿಕೊಳ್ಳಬೇಕು. ಮರಗಳನ್ನು ಬೆಳೆಸಿ ಮಣ್ಣಿನ ಆರೋಗ್ಯದ ಕಡೆಗೆ ಗಮನ ನೀಡಬೇಕಾಗಿದೆ ಎಂದರು. ನೂರು ಗ್ರಾಂ ಮಣ್ಣಿಗೆ ಒಂದು ಗ್ರಾಂ ಸಾವಯುವ ಅಂಶ ಬೇಕು. ಮಣ್ಣನಲ್ಲಿ ಕಬ್ಬಿಣ,ಸತು,ರಂಜಕ, ಸಾರಜನಿಕ ಕೊರತೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಮಣ್ಣು ಮತ್ತು ನೀರಿನ ಪರಿಕ್ಷೆ ಮುಖ್ಯ ಎಂದರು.
ಒAದೇ ರೀತಿಯ ಬೆಳೆ ಬೆಳೆಯ ಬಾರದು. ಪರ್ಯಾಯ ಪದ್ದತಿ ಬೆಳೆ ಬೆಳೆಯಬೇಕು. ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವ ಬದಲು ಬೆಳೆ ಬದಲಾವಣೆ ಮಾಡುತ್ತಿರಬೇಕು, ಮುಂಗಾರು ಸಮಯದಲ್ಲಿ ದ್ವಿದಳ, ಹಿಂಗಾರು ಸಮಯದಲ್ಲಿ ಏಕದಳ ಬೆಳೆಯಬೇಕು,
ಕೃಷಿಯ ಜೊತೆಗೆ ತೋಟಗಾರಿಕೆ ಬೆಳೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಸಮಗ್ರ ಬೇಸಾಯ ಪದ್ದತಿ ಅಳವಡಿಸಬೇಕು.
ನಿಂಬೆ, ಸಿರಿ ಧಾನ್ಯಗಳನ್ನು ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡುವದರಿಂದ ಹೆಚ್ಚು ಲಾಭವಾಗುತ್ತಿದ್ದು ರೈತರು ಹೆಚ್ಚು ಲಾಭದತ್ತ ಗಮನ ವಿಟ್ಟು ಕೌಟುಂಬಿಕ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರದ ಸಹಾಯ ಪಡೆದುಕೊಳ್ಳ ಬೇಕು ಎಂದರು.
ಕೃಷಿ ವಿವಿ ಧಾರವಾಡದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್.ಅಂಗಡಿ, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ. ಬಿ.ಡಿ.ಬಿರಾದಾರ,ಡಾ. ಆರ್.ಬಿ.ಬೆಳ್ಳಿ, ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ, ಗಂಗಾಧರ ನಾಗಣಿ, ಡಾ. ಹೀನಾ ಮಾತನಾಡಿದರು.
ನಿಂಬೆ ಮತ್ತು ಕಬ್ಬು ಬೆಳೆ ಕುರಿತು ಡಾ. ಸಂಜಯ ಪಾಟೀಲ, ಡಾ.ಎಸ್.ಎಸ್.ವಸ್ತçದ,ಡಾ. ಹೀನಾ, ಡಾ. ಪ್ರಸನ್ನ, ಡಾ. ಪ್ರಕಾಶ ಜಿ, ಡಾ. ಪ್ರೇಮಚಂದ ಯೂ, ಡಾ. ಬಾಲಾಜಿ ನಾಯಕ, ಡಾ.ಪ್ರಸಾದ ಎಂ.ಜಿ ಮಾತನಾಡಿದರು.
ಸನ್ಮಾನಿತ ಪ್ರಗತಿಪರ ರೈತರಾದ ಭಾರತಿ ಮೆಂಡೆಗಾರ, ರಾಜಶೇಖರ ನಿಂಬರಗಿ, ಸಂಜು ಇವರು ಮಾತನಾಡಿದರು.
ವೇದಿಕೆಯ ಮೇಲೆ ನಿಂಬೆ ಅಭಿವೃದ್ದಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ರಾಹುಲ ಬಾವಿದೊಡ್ಡಿ, ಉಪ ಕೃಷಿ ನಿರ್ದೇಶಕ ಡಾ. ಚಂದ್ರಕಾAತ ಪವಾರ, ಜೀತಪ್ಪ ಕಲ್ಯಾಣಿ, ಸಾಲೋಟಗಿಯ ಸೋಮಯ್ಯ ಚಿಕ್ಕಪಟ್ಟ, ವಿಜಯಪುರ ಕೃಷಿ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ, ಮಲ್ಲಿಕಾರ್ಜುನ ಪಾಟೀಲ ಮತ್ತಿತರಿದ್ದರು.
ಇದೇ ವೇಳೆ ತಾಲೂಕಿನಲ್ಲಿ ರೈತರ ಆದಾಯ ದ್ವಿಗುಣ ಗೊಂಡ ರೈತರನ್ನು ಸನ್ಮಾನಿಸಲಾಯಿತು. ಅದೇ ವೇಳೆ ರೈತ ಮಹಿಳೆಯರಿಗೆ ತರಕಾರಿ ಕಿಟ್ ವಿತರಣೆ ಮಾಡಲಾಯಿತು.