ಆಶಾಢ ಏಕಾದಶಿ ನಿಮಿತ್ಯ ಶ್ರೀ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ

Ravi Talawar
ಆಶಾಢ ಏಕಾದಶಿ ನಿಮಿತ್ಯ ಶ್ರೀ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ
WhatsApp Group Join Now
Telegram Group Join Now
ಅಥಣಿ: ಆಶಾಢ ಏಕಾದಶಿ ನಿಮಿತ್ಯ ಶ್ರೀ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ, ನೃತ್ಯದೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ಶ್ರೀ ವಿಠ್ಠಲ ಮಂದಿರಕ್ಕೆ ಆಗಮಿಸಿದರು.
ಶ್ರೀ ಸುಧಾ ಭಜನಾ ಮಂಡಳದ ಭಗಿನಿಯರು ಸ್ಥಳೀಯ ಶ್ರೀ ನರಸಿಂಹ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹೊರಟು ಬಾರೆ ಭಾಗ್ಯದ ನಿಧಿಯೇ, ಇಟ್ಟಿಗೆ ಮೇಲೆ ನಿಂತಾನಮ್ಮ ತಾನು,  ಗುರು ಮಧ್ವರಾಯರಿಗೆ, ರಂಗಾ ನಿನ್ನ ಕೊಂಡಾಡುವೆ, ಶ್ರೀಪತಿಯು ನಮಗೆ ಸಂಪದವೀಯಲಿ  ಸೇರಿದಂತೆ ಅನೇಕ  ದಾಸರ  ಪದಗಳನ್ನು ಹಾಡುತ್ತ, ಕುಣಿಯುತ್ತ ಜೋಶಿ ಗಲ್ಲಿ, ಹಬ್ಬು ಗಲ್ಲಿ, ದೇಶಪಾಂಡೆ ಗಲ್ಲಿಯ ಮೂಲಕ ಶ್ರೀ ವಿಠ್ಠಲ ಮಂದಿರ ತಲುಪಿದರು.
ಮೆರವಣಿಗೆ ಮೂಲಕ ಪಲ್ಲಕ್ಕಿ ಹಾಗೂ ಹರಿವಾಣ ಸೇವೆಯನ್ನು ದೇವರಿಗೆ ಅರ್ಪಿಸಲಾಯಿತು  ಏಕಾದಶಿ ವೃತದ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಠವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶ್ರೀ ಸುಧಾ ಭಜನಾ ಮಂಡಳದ ರಮಾ ಕುಲಕರ್ಣಿ ಹೇಳಿದರು.
ಮೆರವಣಿಗೆಯಲ್ಲಿ ರಮಾ ಕುಲಕರ್ಣಿ, ಪ್ರಜ್ಞಾ ಕುಲಕರ್ಣಿ, ಮೇಧಾ ಮಣ್ಣೂರ, ಮಂಜರಿ ದೇಶಮುಖ, ಅನಿತಾ ಸಿದ್ಧಾಂತಿ, ಹೇಮಲತಾ ವಾಯಲಾಯಿ, ನಮಿತಾ ಕುಲಕರ್ಣಿ, ಮೃಣಾಲಿನಿ ದೇಶಪಾಂಡೆ, ನಂದಾ ಪಾಟೀಲ, ನೀತಾ ಕುಲಕರ್ಣಿ, ರಮಾ ಕೌಲಗುಡ್ಡ, ಲಕ್ಷ್ಮೀ ದೇಶಪಾಂಡೆ,  ಬೇಬಿ ಜೋಶಿ, ಐಶ್ವರ್ಯ ನಾಯಿಕ,  ಗೌರಿ ತಳಗಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
One attachment • Scanned by Gmail

WhatsApp Group Join Now
Telegram Group Join Now
Share This Article