ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಸಚಿವರಾಗಿರುವ ಶಿವರಾಜ್ ತಂಗಡಿ ಅವರಿಗೆ ದೂರವಾಣಿ ಕರೆ ಮಾಡಿ, ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆಯ ಕುರಿತು ಚರ್ಚಿಸಿದಾಗ, ಜಲಾಶಯದಲ್ಲಿ ನೀರಿನ ಶೇಖರಣೆ ಹೆಚ್ಚಾಗಿದೆ , ಮಲೆನಾಡಿನಾದ್ಯಂತ ಉತ್ತಮ ಮಳೆ ಬರುತ್ತಿರುವುದರಿಂದ ಸಭೆ ಕರೆಯೋದು ಬೇಡ, ಕಾಲುವೆಗಳಿಗೆ ನೀರು ಬಿಡಿರಿ ಎಂದು ತುಂಗಭದ್ರಾ ಜಲಾಶಯದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೇಳಿದರು.
(1) ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆ, (LLC )ಗೆ ಈ ದಿನ ಬೆಳಗ್ಗೆ ತುಂಗಭದ್ರಾ ಮಂಡಳಿಯ ಮುಖ್ಯ ಕಾರ್ಯದರ್ಶಿಯು ಪೂಜೆ ಸಲ್ಲಿಸಿ ಕರ್ನಾಟಕ ಮತ್ತು ಆಂಧ್ರ ಕೋಟದ ನೀರು ಬಿಡಲು ಆರಂಭಿಸಿದ್ದಾರೆ.
(2) ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ (HLC) ಆಂಧ್ರದಲ್ಲಿ 19 ನೇ ತಾರೀಕು ನಡೆಯಲಿರುವ ಮೀಟಿಂಗ್ ನಲ್ಲಿ ತೀರ್ಮಾನ ಕೈಗೊಂಡು ಆದೇಶ ಬಂದ ನಂತರ ಕರ್ನಾಟಕ ಮತ್ತು ಆಂಧ್ರ ಕೋಟದ ನೀರು ಬಿಡಲಾಗುವುದು.
(3) ತುಂಗಭದ್ರಾ ಎಡದಂಡೆಯ( LBMC) ಕಾಲುವೆಗೆ ಹಾಗೂ ರಾಯ ಬಸವಣ್ಣ ಕಾಲುವೆಗಳಿಗೆ ನಾಳೆಯಿಂದ ನೀರು ಬಿಡಲಾಗುವುದು.
ನಾಳೆಯಿಂದ ತುಂಗಭದ್ರ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್ಸ್ ವರೆಗೂ ನೀರು ಬರುವ ಸಾಧ್ಯತೆಗಳಿವೆ.