ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ

Ravi Talawar
ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ
WhatsApp Group Join Now
Telegram Group Join Now

ಬೆಂಗಳೂರು, ಜುಲೈ.17: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ಗೆ (GT Mall) ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದ ಎಂಬ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಸದ್ಯ ಈಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ ಮಾಡಲಾಗಿದೆ. ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿಸಲಾಗಿದೆ. ಮಾಲ್​ ಇನ್​​ಚಾರ್ಜ್ ಸುರೇಶ್​​​ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.

ರೈತ ಫಕೀರಪ್ಪ ಪಂಚೆ ಧರಿಸಿ ಮಾಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರೈತನನ್ನು ಅವಮಾನಿಸಿದಕ್ಕೆ ಕನ್ನಡಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಲ್ ಇನ್ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಜಗ್ಗಲಿಲ್ಲ. ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಸದ್ಯ ಈಗ ಮಾಲ್​ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದೆ.

ಇನ್ನು ಈ ಘಟನೆ ಸಂಬಂಧ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಮುಖ ನೋಡಿ, ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ‌ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್​ಸೆಟ್. ಜಿ.ಟಿ.ಮಾಲ್​ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ, ದುರಹಂಕಾರದಿಂದ ಮಾಡುತ್ತಿದ್ದಾರೋ? ಜಿ.ಟಿ.ಮಾಲ್​ನವರು ಹಾಗೇ ನಡೆದುಕೊಂಡಿದ್ದು ತಪ್ಪು, ಖಂಡನೀಯ. ಮುಖ ನೋಡಿ ಗೌರವ ಕೊಡುವುದು ಖಂಡನೀಯ ಎಂದರು.

WhatsApp Group Join Now
Telegram Group Join Now
Share This Article