ಕರಾವಳಿಯಲ್ಲಿ ವರುಣನ ಅಬ್ಬರ: ಇಡೂರಿನ ಮನೆಗಳಿಗೆ ನೀರು ನುಗ್ಗಿ ಗ್ರಾಮವೇ ಮುಳುಗಡೆ

Ravi Talawar
ಕರಾವಳಿಯಲ್ಲಿ ವರುಣನ ಅಬ್ಬರ: ಇಡೂರಿನ ಮನೆಗಳಿಗೆ ನೀರು ನುಗ್ಗಿ ಗ್ರಾಮವೇ ಮುಳುಗಡೆ
WhatsApp Group Join Now
Telegram Group Join Now

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಮುಂದುವರೆದಿದೆ. ವರುಣನ ಅಬ್ಬರದಿಂದ ಹಲವೆಡೆ ಹಾನಿ ಸಂಭವಿಸುತ್ತಿದ್ದು, ಕಾರವಾರ ತಾಲೂಕಿನ ಇಡೂರಿನ ಮನೆಗಳಿಗೆ ನೀರು ನುಗ್ಗಿ ಗ್ರಾಮವೇ ಮುಳುಗಡೆಯಾಗುವಂತಾಗಿದೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾರವಾರ ತಾಲೂಕಿನಲ್ಲಿಯೂ ಧಾರಾಕಾರ ಮಳೆಯಿಂದ ಚೆಂಡಿಯಾ ಬಳಿ ಇರುವ ಗುಡ್ಡದ ಪಕ್ಕದ ಇಡೂರು ಗ್ರಾಮಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈ ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿಯೇ ನೌಕಾನೆಲೆಯ ಕಾಂಪೌಂಡ್ ಇದೆ. ಹೀಗಾಗಿ, ಮಳೆ ನೀರು ಮುಂದೆ ಹೋಗದೇ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಸುಮಾರು 25 ಮನೆಗಳು ಜಲಾವೃತವಾಗಿದೆ. ಪ್ರತಿ ವರ್ಷ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಕ್ರಮ ಕೈಗೊಳ್ಳಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಅಧಿಕಾರಿಗಳು ಪ್ರತಿ ಮಳೆಗಾಲದಲ್ಲೂ ನೆಪಮಾತ್ರಕ್ಕೆ ಸ್ಥಳಕ್ಕೆ ಬಂದು ತೆರಳುತ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸದ ಕಾರಣ ಯಾವಾಗಲೂ ಸಮಸ್ಯೆಯಲ್ಲೇ ದಿನ‌ ಕಳೆಯಬೇಕಾದ ಸ್ಥಿತಿ ಇದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ನೀರು ಸರಾಗವಾಗಿ ಸಮುದ್ರ ಸೇರಲಾಗದೆ, ಇಡೂರು ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಇದೇ ರೀತಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಮಳೆ ಹೆಚ್ಚಾದಾಗ ಗ್ರಾಮದಲ್ಲಿ ನೀರು ತುಂಬಿಕೊಳ್ಳುತ್ತದೆ. ನೌಕಾನೆಲೆಯವರು ಹಾಕಿರುವ ಕಾಂಪೌಂಡ್​​ಗಳಲ್ಲಿ ಮಳೆಗಾಲದಲ್ಲಿ ನೀರು ಸಾಗುವಂತೆ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಆದರೆ ಯಾರೂ ಈ ಬಗ್ಗೆ ಪ್ರಶ್ನಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ.
WhatsApp Group Join Now
Telegram Group Join Now
Share This Article