ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದಕ್ಕೆ ನಿವೇದಿತಾಳ ಸಾಧನೆಯೇ ಸಾಕ್ಷಿ:  ಮಹೇಶ್ವರ ಸ್ವಾಮೀಜಿ

Ravi Talawar
ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದಕ್ಕೆ ನಿವೇದಿತಾಳ ಸಾಧನೆಯೇ ಸಾಕ್ಷಿ:  ಮಹೇಶ್ವರ ಸ್ವಾಮೀಜಿ
WhatsApp Group Join Now
Telegram Group Join Now
ಗದಗ : ನಗರದ ಹುಡ್ಕೊಕಾಲೋನಿ ನಿವಾಸಿ ಕೂಡಲಯ್ಯ ಭೂಸನೂರಮಠ ಅವರ ದ್ವಿತೀಯ ಸುಪುತ್ರಿ ಕುಮಾರಿ ನಿವೇದಿತಾ ಕೂಡಲಯ್ಯ ಭೂಸನೂರಮಠ ಅವರು ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನ ಸಾಧಿಸಿ ತೋರಿಸಿದ್ದಾರೆ. ನಿವೇದಿತಾ ತಂದೆ ಕೂಡಲಯ್ಯ ಅವರು ಪೆಟ್ರೋಲ್ ಬಂಕ್ ಒಂದರಲ್ಲಿ ಕಾರ್ಕೂನರಾಗಿ ಕೆಲಸ ಮಾಡುತ್ತಿದ್ದು, ಛಲ ಬಿಡದ  ಮಗಳು ಬಡತನದ ನಡುವೆಯೂ ತನ್ನ ಸಾಧನೆ ತೋರಿದ್ದಾಳೆ ಎಂದು ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೇಳಿದರು.
ಅವರು ಅಖಿಲಭಾರತ ಜಂಗಮ ಸೇವಾ ಸಮಿತಿಯಿಂದ ಕುಮಾರಿ  ನಿವೇದಿತಾ ಭೂಸನೂರಮಠ ಅವರಿಗೆ ಸನ್ಮಾನ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದರು.ಪಿಯುಸಿ ಬಳಿಕ 2017ರಿಂದಲೂ ಸತತ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದಾಗಿ ನಿವೇದಿತಾ ಸಿಎ ಪಾಸಾಗಲು ಸಾಧ್ಯವಾಗಿದ್ದು, ಬಡ ಪ್ರತಿಭಾನ್ವಿತ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಜಿಲ್ಲೆ ರಾಮದುರ್ಗ. ತಾಲೂಕಿನ ಬಟಕುರ್ಕಿ ಗ್ರಾಮದ ಚೌಕೇಶ್ವರ ವಿರಕ್ತಮಠದ ಗದಗಯ್ಯ ಸ್ವಾಮೀಜಿ ಮಾತನಾಡಿ, ನಿವೇದಿತಾಳ ಸಾಧನೆ ಮೆಚ್ಚುವಂತದ್ದು, ಬರುವ ದಿನಮಾನಗಳಲ್ಲಿ ಮತ್ತಷ್ಟು ಮಗದಷ್ಟು ಬೆಳೆಯಲಿ ಇತರರಿಗೆ ಮಾದರಿಯಾಗುವಂತಹ ಕಾರ್ಯ ಆಕೆಯಿಂದಗಾಲಿ ಎಂದು ಶುಭ ಹಾರೈಸಿದರು.
      ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಜಂಗಮ ಸೇವಾ  ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ ದಂಡಾವತಿಮಠ ಸೇರಿದಂತೆ ಸಮಿತಿಯ ಪದಾಧಿಕಾರಿಗಳೆಲ್ಲ ಕುಮಾರಿ ನಿವೇದಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
 ಸಮಾರಂಭದಲ್ಲಿ ಬಸಯ್ಯ ಸಾಸ್ವಿಹಳ್ಳಿಮಠ, ಕುಮಾರಸ್ವಾಮಿ ಹಿರೇಮಠ, ವೀರಯ್ಯ ಕಂಬಾಳಿಮಠ, ಜಗದೀಶ ಹಿರೇಮಠ, ವಿ.ಎಂ. ಕುಂದ್ರಾಳಹಿರೇಮಠ, ಫಕ್ಕೀರಯ್ಯ ಹಿರೇಮಠ, ಉಮಾಪತಿ ಭೂಸನೂರಮಠ, ಆನಂದಯ್ಯ ವಿರಕ್ತಮಠ, ಆನಂದಯ್ಯ ಭೂಸನೂರಮಠ, ಅನುಷಾ ಭೂಸನೂರಮಠ, ಶ್ರೀಮತಿ ಅನ್ನಮ್ಮ ಚನ್ನಪ್ಪ ಬಿನ್ನಾಳ, ನಮ್ರತಾ ಬಿನ್ನಾಳ, ಅನ್ನಪೂರ್ಣ ಕೂಡಲಯ್ಯ ಭೂಸನೂರಮಠ, ವಿಜಯಲಕ್ಷ್ಮೀ ವಿರೇಶಸ್ವಾಮಿ ಹೊಸಳ್ಳಿಮಠ, ಕುಮಾರಸ್ವಾಮಿ ವೆಂಕಟಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  ವೀರಯ್ಯ ಹೊಸಮಠ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಹಿರೇಮಠ ವಂದಿಸಿದರು.
WhatsApp Group Join Now
Telegram Group Join Now
Share This Article