ದಾಸ್ತಿಕೊಪ್ಪ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಎಮ್ಎಫ್ ಅನುದಾನದಡಿ ಸ್ಮಾರ್ಟ್ಕ್ಲಾಸ್ ಉದ್ಘಾಟಿಸಲಾಯಿತು. ಕ್ಲಾಸ್ ಉದ್ಘಾಟಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಅವರು, ಡಿಜಿಟಲ್ ಕ್ಲಾಸ್ಗಳು ಪಠ್ಯ ಕಲಿಕೆಗೆ ಪೂರಕವಾಗಲಿವೆ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಮಕ್ಕಳ ಜ್ಞಾನ ವಿಕಾಸಕ್ಕೆ ಡಿಜಿಟಲ್ ಮಾಧ್ಯಮವೂ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಅವರು ಮಾತನಾಡಿ, ಶಿಕ್ಷಕ, ಶಿಕ್ಷಕಿಯರು ತಮ್ಮ ಕೌಶಲಗಳನ್ನು ಬಳಸಿಕೊಂಡು ಡಿಜಿಟಲ್ ಕ್ಲಾಸ್ ಪಾಠ ಬೋಧನೆಗೆ ಅಣಿಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮೀ ತಿಗಡಿ, ಉಪಾಧ್ಯಕ್ಷ ಉಮೇಶ ಶಿದ್ರಾಮನಿ, ಸದಸ್ಯರಾದ ಶಿವನಗೌಡ ಪಾಟೀಲ, ಶಾಲೆಯ ಶಿಕ್ಷಕರಾದ ಕೆ.ಡಿ.ಹೊಳಿ, ಎಮ್.ಎಸ್.ಕಲ್ಮಠ, ಎಸ್ಡಿಎಮ್ಸಿ ಸದಸ್ಯರು ಉಪಸ್ಥಿತರಿದ್ದರು.