.ರಾಯಬಾಗ: ರಾಯಬಾಗ ತಾಲೂಕಿನ ಬೆಕ್ಕೇರಿ ವಲಯದ ವಿಠ್ಠಲ್ ನಗರ ಕಾರ್ಯಕ್ಷೇತ್ರದ ಚಂದನವ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಜನ ಜಾಗೃತಿ ಸದಸ್ಯರು ಮತ್ತು ಊರಿನ ಗಣ್ಯರಾದ ಜಿನೇಂದ್ರ ಖೇಮಲಾಪುರೇ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಸಂಪನ್ಮೂಲ ವ್ಯಕ್ತಿಯವರಾದ ಅರೋಗ್ಯ ಇಲಾಖೆಯ ನರ್ಸಿಂಗ್ ಆಫೀಸರ ಅವರಾದ ಶ್ರೀಶೈಲ್ ಸರ್ ಅವರು.ಕೇಂದ್ರದ ಅಧ್ಯಕ್ಷರಾದ ನೀಲವ್ವ್ ಕೋಳಿ. ಹಾಗೂ ಒಕ್ಕೂಟ ಅದ್ಯೆಕ್ಷರಾದ ಶ್ರೀಮತಿ ಅನಿತಾ ಖೆಮಲಾಪುರೆ ಇವರ ಸಮ್ಮುಖದಲ್ಲಿ ಕಾರ್ಯಕ್ರಮ ಚಾಲನೆ ಮಾಡಲಾಯಿತು.
ಸಂಪನ್ಮೂಲ ವ್ಯಕ್ತಿಯವರಾದ ಶ್ರೀಶೈಲ್ ಸರ್ ಅವರು ಪೌಷ್ಟಿಕ ಆಹಾರ ಹಾಗೂ ಸಿರಿಧಾನ್ಯಗಳ ಬಳಕೆಯಿಂದ ಆಗುವ ಉಪಯೋಗಗಳು, ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಮತ್ತು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇಂತಹ ಒಳ್ಳೆ ಕಾರ್ಯಕ್ರಮವನ್ನು ನಿಮಗಾಗಿ ಗ್ರಾಮಗಳಲ್ಲಿ ಮಾಡುತ್ತಿದೆ ಅದರ ಸದುಪಯೋಗ ಪಡೆಕೊಳ್ಳಿ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಜನಜಾಗ್ರತಿ ಸದಸ್ಯರಾದ ಜಿನೇಂದ್ರ ಖೇಮಲಾಪುರೆ ಅವರು ಗ್ರಾಮದಲ್ಲಿ ಯೋಜನೆಯ ಸಿರಿ ಧಾನ್ಯಗಳ ಬಳಕೆ ನಾನು ಮಾಡುತ್ತೇನೆ ನೀವು ಎಲ್ಲರೂ ನಿಮ್ಮ್ ಮನೆ ಮನೆಯಲ್ಲೂ ಬಳಸಿ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.ವಲಯದ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ತಿರ್ಲಾಪುರ ಅವರು ಕಾರ್ಯಕ್ರಮ ಅನುಷ್ಠಾನ ಬಗ್ಗೆ ಮಾಹಿತಿ ನೀಡಿದರು.
ಸಿರಿ ಮೇಲ್ವಿಚಾರಕರಾದ ವಿಠ್ಠಲ್ ಸರ್ ಸಿರಿ ಧಾನ್ಯ ಬಳಕೆ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಸಭೆಯಲ್ಲಿ ಜ್ಞಾನ ವಿಕಾಸ್ ಸಮನ್ವಯಧಿಕಾರಿಯಾವರಾದ ಶ್ರೀಮತಿ ಸುರೇಖಾ ಹೆಬ್ಬಳ್ಳಿ.ಸ್ವಾಗತಿಸಿದರು.ಸೇವಾಪ್ರತಿನಿಧಿಯವರಾದ ಶ್ರೀಮತಿ ಮಂಜುಳಾ ಭಜಂತ್ರಿ ವಂದಿಸಿದರು .ಕೇಂದ್ರದ ಎಲ್ಲಾ ಸದಸ್ಯರು ವಿಧ ವಿಧವಾದ ಪೌಷ್ಟಿಕ ಆಹಾರ ಮಾಡಿಕೊಂಡು ಬಂದಿದ್ದರು.ಎಲ್ಲ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಶ್ವಿಗೊಳಿಸಿದರು