ಬಳ್ಳಾರಿ : ಚುನಾವಣೆ ಬಂದಾಗ ಪಕ್ಷ ಬೇದ ಮರೆತು ಈ ಭಾಗದ ಶಾಸಕರು ಧ್ವನಿ ಎತ್ತಬೇಕು ಎನ್ನುವುದು ಆಗ್ರಹ ಮಾಡಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಲು ಮುಂದಾಗುತ್ತದೆ ಎಂದು ಎಚ್ಚರಿಸಿದರು. ಎಮ್ಸ್ ಘೋಷಣೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ನಾಂದಿ ಹಾಡುತ್ತದೆ ನಮ್ಮ ಸಂಘಟನೆ ಮಾಡುತ್ತದೆ. ರಾಹುಲ್ ಗಾಂಧಿ ಪಾದಯಾತ್ರೆ ಬಂದಾಗ ಈಗಿನ ಡಿಸಿಎಂ ಮಾತು ಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದರು.
ಕಲಬುರಗಿ ಕ್ಷೇತ್ರದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದು, ಹೈದರಾಬಾದ್ ಕರ್ನಾಟಕ ದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದೇವೆ. ಎಚ್.ಕೆ ಪಾಟೀಲ ಎಮ್ಸ್ ವೈದ್ಯಕೀಯ ಘೋಷಣೆಗೆ ಅಡ್ಡಿ ಪಡಿಸಿದ ಇವರ ಮೇಲೆ ಹಾರಿಯ್ದದರು.
ಇದೇ ತಿಂಗಳು 16 ತಾರಿಕಿನಂದು ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಲಾಗುತ್ತದೆ. 371 j ತೆಗೆದು ಹಾಕಲು ಕೆಲವು ಹುನ್ನಾರ ನಡೆಯುತ್ತದೆ,ಇದಕ್ಕೆ ಯಾವುದೇ ಅಡಚಣೆ ಹಾಗಬಾರದು ಇದನ್ನು ಕೂಡ ಕೇಂದ್ರ ಸರ್ಕಾರಕ್ಕೆ ಅಂದು ಮನವಿ ಸಲ್ಲಿಸುತ್ತೇವೆ ಎಂದರು. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಒತ್ತಾಯಿಸಿದರು.
ಹೈದರಾಬಾದ್ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಒಂದು ಶಾಖೆ ಮತ್ತು ಜಯದೇವ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಸಬ್ ಆಸ್ಪತ್ರೆ ತೆರೆಯಲು ಒತ್ತಯಿಸಲಾಗುತ್ತದೆ. ಈ ಸಂದರ್ಭದಲ್ಲಿ ಪನ್ನರಾಜ್,ಅಶೋಕ್ ಜೈನ್ ವಿಠ್ಠಲ, ಮಾದವ ರೆಡ್ಡಿ ,ರಿಜ್ವಾನ್ ಖಾನ್ ಇನ್ನಿತರರು ಇದ್ದರು.