ಗದಗ: ಜುಲೈ 11: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಂಡರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2024-25 ನೇ ಸಾಲಿನ ಐಟಿಐ ಪ್ರವೇಶÀಕ್ಕಾಗಿ ಪಿಪಿಪಿ ಯೋಜನೆಯಡಿ ಎಲೆಕ್ಟ್ರಿಶಿಯನ್, ಫಿಟರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೈಕಲ್, ಮ್ಯಾನುಫ್ಯಾಕ್ಷರಿಂಗ ಪ್ರೋಸೆಸ್ ಕಂಟ್ರೋಲ್ ಮತ್ತು ಅಟೋಮೇಷನ್ , ಇಂಡಸ್ಟ್ರಿಯಲ್ ರೋಬೋಟೆಕ್ಸ್ ಮತ್ತು ಡಿಜಿಟಲ್ ಮ್ಯಾನ್ಯುಫ್ಯಾಕ್ಷರಿಂಗ ಟೆಕ್ನಿಷಿಯನ್ ವೃತ್ತಿಗಳಲ್ಲಿ ( ಐಎಂಸಿ)ಕೋಟಾ ಶೀಟುಗಳನ್ನು ಭರ್ತಿಮಾಡಲಾಗುವುದು.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 18 ರೊಳಗೆ ಅರ್ಜಿ ಫಾರ್ಮ ಪಡೆದು ಭರ್ತಿಮಾಡಿ ಅವಶ್ಯವಿರುವ ದಾಖಲಾತಿಗಳನ್ನು ಸಲ್ಲಿಸುವುದು. ಜುಲೈ 19 ರಂದು ಮೆರಿಟ್ ಆಧಾರದ ಮೇಲೆ ಆಯ್ಕಯಾದ ಅಭ್ಯರ್ಥಿಗಳು ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ವತಿಯಿಂದ ನಿಗದಿ ಪಡಿಸಲಾಗುವ ಶುಲ್ಕವನ್ನು ಭರಿಸಿ ತರಬೇತಿಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಮುಂಡರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.