‘ಲೋಕ’ಸೋಲಿನ ಪರಾಮರ್ಶೆಗೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಪಡೆ

Ravi Talawar
‘ಲೋಕ’ಸೋಲಿನ ಪರಾಮರ್ಶೆಗೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಪಡೆ
WhatsApp Group Join Now
Telegram Group Join Now

ಬೆಂಗಳೂರು: ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕಳಪೆ ಸ್ಥಾನ ಗಳಿಸಿರುವ ಹಿಂದಿನ ನಿಜವಾದ ಕಾರಣವನ್ನು ತಿಳಿಯಲು ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಮೂವರು ಸದಸ್ಯರ ತಂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷ 14ರಿಂದ 15 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರೂ ಗಳಿಸಿದ್ದು ಮಾತ್ರ ಕೇವಲ 9 ಸ್ಥಾನಗಳು.

ಮಧುಸೂದನ್ ಮಿಸ್ತ್ರಿ ಮತ್ತು ಲೋಕಸಭಾ ಸದಸ್ಯರಾದ ಗೌರವ್ ಗೊಗೊಯ್ ಮತ್ತು ಹಿಬಿ ಹೆಡೆನ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಎಐಸಿಸಿ ಪದಾಧಿಕಾರಿಗಳು, ಹಾಲಿ ಸಚಿವರು, ಹಿರಿಯ ನಾಯಕರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಶಾಸಕರು, ಎಂಎಲ್ಸಿಗಳು ಮತ್ತು ನಾಯಕರ ತಂಡವೊಂದು ಬೆಂಗಳೂರಿಗೆ ಆಗಮಿಸಿದ ಕಾರ್ಯಪಡೆಯಲ್ಲಿದೆ.

ಕಾಂಗ್ರೆಸ್ ನಾಯಕರು ಶಾಸಕರು ಮತ್ತು ಸಚಿವರಾಗಿರುವ ಕ್ಷೇತ್ರಗಳಲ್ಲಿಯೂ ಪಕ್ಷವು ವಿರೋಧ ಪಕ್ಷಕ್ಕೆ ಹೇಗೆ ದೊಡ್ಡ ಮುನ್ನಡೆ ನೀಡಿದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನಿಸುತ್ತಾರೆ. ವಿವಿಧ ಕ್ಷೇತ್ರಗಳ ಜವಾಬ್ದಾರಿ ನೀಡಿದ ಸಚಿವರು ಏಕೆ ಕಳಪೆ ಸಾಧನೆ ಮಾಡಿದ್ದಾರೆ ಎಂದು ಪರಾಮರ್ಶಿಸಲು ನಾಯಕರು ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ದಕ್ಷಿಣ ಕರ್ನಾಟಕದಲ್ಲಿ ತನ್ನ ಮತಗಳನ್ನು ಕೇಸರಿ ಪಕ್ಷಕ್ಕೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಆದರೆ ರಾಜ್ಯಕ್ಕೆ ಬಂದಿರುವ ಸತ್ಯಶೋಧನಾ ತಂಡವು ಅದನ್ನು ಮೀರಿ ಹೋಗಿ ನಾಯಕರ ಸಂಬಂಧಿಕರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಟಿಕೆಟ್ ನೀಡಿದ್ದು ಹೇಗೆ ಎಂದು ಕಾರಣ ಹುಡುಕಲು ಪ್ರಯತ್ನಿಸುತ್ತದೆ, ಇದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ.

ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಲು ಮಾತ್ರ ಇರುವುದು, ಅಧಿಕಾರ ಅನುಭವಿಸುವುದು ನಾಯಕರು ಎಂಬ ಅಸಮಾಧಾನ ಕೇಳಿಬರುವುದು ಸಾಮಾನ್ಯವಾಗಿತ್ತು. ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಎದ್ದಿದೆಯೇ ಎಂಬ ಆತಂಕ ನಾಯಕರದ್ದಾಗಿದೆ.

ಪಕ್ಷದ ಮುಖಂಡರು ತಮ್ಮ ಅಥವಾ ಮಾಧ್ಯಮದ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಕಾರ್ಯಕರ್ತರು ದೂರುತ್ತಲೇ ಇದ್ದು ಇದೇ ಅಸಮಾಧಾನ ಮುಂದುವರಿದರೆ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಈ ಬಗ್ಗೆ ಮಾತನಾಡಿರುವ ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ‘ಕಾಂಗ್ರೆಸ್ ನಾಯಕತ್ವ ಗಂಭೀರವಾಗಿರುತ್ತಿದ್ದರೆ ಎಲ್ಲ ರಂಗಗಳಲ್ಲಿ ಹೆಚ್ಚು ಕೂಲಂಕುಷವಾಗಿ ಕೆಲಸ ಮಾಡಬಹುದಿತ್ತು. ಕೋಲಾರದಂತಹ ಕಡೆ ಪಕ್ಷಕ್ಕೆ ಹಿನ್ನಡೆಯಾದ ಗುಂಪುಗಾರಿಕೆಯ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಇತ್ಯರ್ಥಪಡಿಸಬಹುದಾಗಿತ್ತು ಎಂದಿದ್ದಾರೆ.

WhatsApp Group Join Now
Telegram Group Join Now
Share This Article