ಡೆಂಗ್ಯೂ ಪರೀಕ್ಷೆಗೆ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ?!

Ravi Talawar
ಡೆಂಗ್ಯೂ ಪರೀಕ್ಷೆಗೆ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ?!
WhatsApp Group Join Now
Telegram Group Join Now

ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ಡೆಂಗ್ಯೂ ಪರೀಕ್ಷೆಗೆ ದರ ನಿಗದಿಪಡಿಸಲಾಗಿದ್ದರೂ ಬೆಂಗಳೂರು ನಗರದಾದ್ಯಂತ ಅನೇಕ ಲ್ಯಾಬ್​ಗಳು ನಿಗದಿತ ದರಕ್ಕಿಂತ 2ರಿಂದ 10 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಎನ್​ಎಸ್1 ಆ್ಯಂಟಿಬಾಡಿ ಇಎಲ್​ಐಎಸ್​ಎ ಮತ್ತು ಐಜಿಎಂ ಆ್ಯಂಟಿಬಾಡಿ ಪರೀಕ್ಷೆಗೆ 300 ರೂ. ದರ ನಿಗದಿಪಡಿಸಿತ್ತು. ಎನ್​​ಎಸ್​​​1 ಆ್ಯಂಟಿಬಾಡಿ, ಐಜಿಎಂ ಮತ್ತು ಐ​ಜಿಜಿ ಆ್ಯಂಟಿಬಾಡಿಗಳ ಕ್ಷಿಪ್ರ ಪರೀಕ್ಷೆಗಳಿಗೆ 250 ರೂ. ನಿಗದಿಪಡಿಸಲಾಗಿದೆ.

ಡೆಂಗ್ಯೂಗೆ ಸಂಬಂಧಿಸಿದ ಕ್ಷಿಪ್ರ ಪರೀಕ್ಷೆಯು ಎನ್​ಎಸ್1 ಪ್ರತಿಜನಕ, ಐ​ಜಿಜಿ ಮತ್ತು ಐ​ಜಿಎಂ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುತ್ತದೆ ಮತ್ತು 1 ರಿಂದ 2 ಗಂಟೆಗಳಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇಎಲ್​ಐಎಸ್​ಎ ಪರೀಕ್ಷೆಯು ಜಿಜಿಎಂ ಆ್ಯಂಟಿಬಾಡಿಗಳ ಪತ್ತೆಹಚ್ಚುವಿಕೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವರದಿ ಬರಲು ಸುಮಾರು 6 ರಿಂದ 8 ಗಂಟೆಗಳು ಅಥವಾ ಹೆಚ್ಚು ಸಮಯ ಬೇಕಾಗುತ್ತದೆ.

ಬಹುತೇಕ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಸಾಮಾನ್ಯವಾಗಿ 500 ರಿಂದ 1000 ರೂ. ತಗಲುತ್ತದೆ. ಇದಕ್ಕೆ ಸರ್ಕಾರ ದರಗಳನ್ನು ಮಿತಿಗೊಳಿಸಿದ ಸುಮಾರು ಒಂದು ವಾರದ ನಂತರ, ಬೆಂಗಳೂರು ನಗರದಾದ್ಯಂತ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವುದು ತಿಳಿದುಬಂದಿದೆ.

WhatsApp Group Join Now
Telegram Group Join Now
Share This Article