ಬೈಲಹೊಂಗಲ: ಸಾವಯವ ಕೃಷಿಕರ ಬಹುದಿನಗಳ ಕರೆಯ ಮೇರಿಗೆ ಸಾವಯವ ಕೃಷಿ ಸಂತ ಮಹಾರಾಷ್ಟ್ರದ ಕನ್ನೇರಿಮಠದ ಸದೃಶ್ಯ ಕಾಡಸಿದ್ದಶ್ವರ ಸ್ವಾಮೀಜಿ ಬುಧವಾರ ಜು10ರಂದು ಮಧ್ಯಾಹ್ನ 12 ಘಂಟೆಗೆ ಸಮೀಪದ ಮರಕುಂಬಿ ಗ್ರಾಮದ ಅಡವಿಸಿದ್ದೇಶ್ವರ ಸಮುದಾಯ ಭವನದಲ್ಲಿ, ಕೆಎಲ್ಈ ಸಂಸ್ಥೆಯ ಕೆವಿಕೆ ಮತ್ತಿಕೊಪ್ಪ, ಸಿದ್ದಸಿರಿ ಸಾವಯವ ಕೃಷಿಕರ ಸಂಘ ಬೆಳಗಾವಿ ಹಾಗೂ ಚಾಮುಂಡೇಶ್ವರಿ ಬಸಪ್ಪನವರ ಆತ್ಮಾ ಸಂಘ ಮರಕುಂಬಿ ಸಂಯುಕ್ತ ಆರ್ಶಯದಲ್ಲಿ ಏರ್ಪಡಿಸಿರುವ ಒಣ ಬೆಸಾಯದಲ್ಲಿ ಸಾವಯವ ಕೃಷಿ, ರೈತರ ನಡೆ ಸಾವಯವದ ಕಡೆ ವಿಚಾರ ಸಂಕಿರ್ಣದಲ್ಲಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನಗಳು ಪ್ರದರ್ಶನ ಮತ್ತು ವ್ಯಾಪಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಎಲ್ಈ ಸಂಸ್ಥೆಯ ಅಧ್ಯಕ್ಷ ಶಾಸಕ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಬಿ.ಆರ್.ಪಾಟೀಲ, ಡಾ.ವಿ.ಆಯ್.ಪಾಟೀಲ, ಎಸ್.ಸಿ.ಮೆಟಗುಡ್, ಡಾ.ಸಿ.ಎಸ್.ಸಾಧುನವರ, ಪಿಕೆಪಿಎಸ್ ಅಧ್ಯಕ್ಷಕಾರ್ತಿಕ ಪಾಟೀಲ, ರವಿ ಕುರಬೆಟ್ಟ, ಸವದತ್ತಿ ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ರೈತರು, ಕೃಷಿ ನಿರತ ಮಹಿಳೆಯರು, ಹಾಗೂ ರೈತ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು, ಕೆವಿಕೆ ಪ್ರಾಚಾರ್ಯ ಶ್ರೀದೇವಿ ಅಂಗಡಿ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಕನ್ನೆರಿ ಮಠದ ಸ್ವಾಮೀಜಿಯ ಆಗಮನದ ಹಿನ್ನಲೆಯಲ್ಲಿ ಮರಕುಂಬಿ ಗ್ರಾಮದಲ್ಲಿ ಸೋಮವಾರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಹಾಗೂ ಕಾರ್ಯಕ್ರಮಕ್ಕೆ ಬಂದ ರೈತರಿಗೆ ಉಪಹಾರ ವ್ಯವಸ್ಥೆಯನ್ನು ಮುಖಂಡರು ತಯಾರಿ ವಿಕ್ಷಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಕಾರ್ತಿಕ ಪಾಟೀಲ ಸವದತ್ತಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಕೆವಿಕೆ ವಿಜ್ಞಾನಿ ಎಸ್.ಎಮ್ ವಾರದ, ಆತ್ಮ ಸಂಘದ ಅಧ್ಯಕ್ಷ ರವಿ ಕುರಬೆಟ್ಟ, ಸಾವಯವ ಕೃಷಿಕರಾದ ಆನಂದ ವಾಲಿ, ಶಿವಾನಂದ ಗುರಕನವರ, ಮಂಜು ಮುರ್ಕಿಭಾಂವಿ, ರಾಯಣಗೌಡ ಪಾಟೀಲ, ವಿಶ್ವನಾಥ ರೇವಣ್ಣವರ, ಮಲ್ಲಿಕಾರ್ಜುನ ಗುರಕನವರ, ಮಹಾಂತೇಶ ಹೀರೆಮಠ, ಅಡಿವೆಪ್ಪ ಮೇಟಿ, ನೀರಗುಣ ರೆವಣ್ಣವರ, ಮಡಿವಾಳಪ್ಪ ಅಕ್ಕಿಸಾಗರ, ರೇವಪ್ಪ ಕೊಟೂರ ಮುಂತಾದವರು ಇದ್ದರು.