ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ : ಡಾ.ಮಹಾಂತ ಪ್ರಭು ಸ್ವಾಮೀಜಿ

Ravi Talawar
ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ : ಡಾ.ಮಹಾಂತ ಪ್ರಭು ಸ್ವಾಮೀಜಿ
Oplus_131072
WhatsApp Group Join Now
Telegram Group Join Now
ಅಥಣಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಮಕ್ಕಳಿಗೆ ಉತ್ತಮವಾದ ಶಿಕ್ಷಣದ ಜೊತೆಗೆ  ಒಳ್ಳೆಯ ಸಂಸ್ಕಾರವನ್ನು  ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು  ಶೇಗುಣಸಿಯ ವಿರಕ್ತಮಠದ  ಡಾ.ಮಹಾಂತ ಪ್ರಭು ಸ್ವಾಮೀಜಿ ಹೇಳಿದರು.
 ಅವರು ಶನಿವಾರ ಇಲ್ಲಿನ ಸುಕ್ಷೇತ್ರ ಗಚ್ಛಿನಮಠದಲ್ಲಿ ಲಿo. ಮುರುಘೇಂದ್ರ ಶಿವಯೋಗಿಗಳ  189ನೇ ಜಯಂತಿ ಉತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾಗಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ  ಆಧ್ಯಾತ್ಮಿಕ ಮಾರ್ಗದಲ್ಲಿ  ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ  ಮತ್ತು ಮಾನವೀಯ ಮೌಲ್ಯಗಳನ್ನ ಕಲಿಸಿಕೊಟ್ಟಾಗ  ಉತ್ತಮ ನಾಗರಿಕರಾಗಿ  ಬೆಳೆಯಲು ಸಾಧ್ಯ ಎಂದು ಎಂದು ಹೇಳಿದರು.
 ಅಥಣಿ ಭೂಮಿಯನ್ನು  ಪಾವನಗೊಳಿಸಿದ  ಮುರುಘೇಂದ್ರ ಸ್ವಾಮಿಗಳು  ಬಸವಣ್ಣನವರ ವಚನಗಳನ್ನು  ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು  ಶಿವಯೋಗದ ಶಿಖರವನ್ನು ಸಾಧಿಸಿದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ  ನಾವೆಲ್ಲ ನಡೆದಾಗ  ನಮ್ಮ ಬದುಕು ಕೂಡ ಸುಂದರವಾಗುತ್ತದೆ ಎಂದು ಹೇಳಿದರು.
ಸಮಾರಂಭದ ನೇತೃತ್ವ ವಹಿಸಿದ್ದ  ಸುಕ್ಷೇತ್ರ ಗಚ್ಚಿನ ಮಠದ  ಶಿವಬಸವ  ಸ್ವಾಮೀಜಿ ಮಾತನಾಡಿ  ಶಿವಯೋಗದ ಶಿಖರವನ್ನು ಸಾಧಿಸುವ ಮೂಲಕ ಮುರುಗೇಂದ್ರ ಸ್ವಾಮಿಗಳು ಕನ್ನಡ ನಾಡಿನಲ್ಲಿಯೇ ಅಥಣಿಯ ಶಿವಯೋಗಿಗಳು ಎಂದು ಪ್ರಖ್ಯಾತರಾಗಿದ್ದಾರೆ.
ಶಿವಯೋಗಿಗಳು ಬೋಧನೆಗಿಂತ ತಾವು ಮಾಡುವ ಕಾರ್ಯದಿಂದಲೇ ಸಾಕಷ್ಟು ವಿಷಯಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಿದ್ದರು. ವಿಶ್ವಗುರು ಬಸವಣ್ಣನವರ ವಚನಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಶಿವಯೋಗ ಸಾಧನೆಯ ಮೂಲಕ ಜಗತ್ತಿಗೆ ಬೆಳಕಾದವರು. ಅವರ ಜಯಂತಿ ಉತ್ಸವದಲ್ಲಿ  ನಾವು ನೀವೆಲ್ಲರೂ ಪಾಲ್ಗೊಳ್ಳುವುದೇ ಒಂದು ಸಂಭ್ರಮ ಎಂದರು.
 ಈ ಸಂದರ್ಭದಲ್ಲಿ   ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಗಡಿ ಇಂಗರಾಜ  ಮಹಾಂತ ಸಿದ್ದೇಶ್ವರ ಸ್ವಾಮಿಜಿ, ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಸಾಹಿತಿ ಡಾ.ಮಾಂತೇಶ ಉಕಲಿ, ಶಿವಕುಮಾರ ಉಮರಾಣಿ, ಬಸವರಾಜು ಉಮರಾಣಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಮನಗೌಡ ಪಾಟೀಲ ಸ್ವಾಗತಿಸಿದರು. ಮಹಾಂತೇಶ ಉಕ್ಕಲಿ ನಿರೂಪಿಸಿ ವಂದಿಸಿದರು.
ವಿಜೃಂಭಣೆಯಿಂದ  ಪಲ್ಲಕ್ಕಿ ಉತ್ಸವ :  ಮುರಗೇಂದ್ರ ಶಿವಯೋಗಿಗಳ ಜಯಂತಿ ಉತ್ಸವದ ಅಂಗವಾಗಿ  ಸುಕ್ಷೇತ್ರ ಗಚ್ಚಿನ ಮಠದಿಂದ  ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  ಮದುವೆ ಗಚ್ಚಿನಮಠದಲ್ಲಿ ಸಮಾರೋಪಗೊಂಡಿತು. ಸಾಯಂಕಾಲ ಧರ್ಮಸಭೆ ಪೂರ್ವದಲ್ಲಿ  ಬಾಲ ಶಿವಯೋಗಿಗಳ ತೊಟ್ಟಿಲು ಉತ್ಸವ ಕಾರ್ಯಕ್ರಮ ಜರುಗಿತು.
WhatsApp Group Join Now
Telegram Group Join Now
Share This Article