ಪಾಲಿ ಜಲಪಾತದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ 50 ಮಂದಿ ಸೇರಿ 150 ಪ್ರವಾಸಿಗರ ರಕ್ಷಣೆ

Ravi Talawar
ಪಾಲಿ ಜಲಪಾತದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ 50 ಮಂದಿ ಸೇರಿ 150 ಪ್ರವಾಸಿಗರ ರಕ್ಷಣೆ
WhatsApp Group Join Now
Telegram Group Join Now

ಬೆಂಗಳೂರು: ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ , ಗೋವಾ  ರಾಜ್ಯಗಳ ಮಳೆರಾಯನ ಅಬ್ಬರ ಜೋರಾಗಿದೆ. ಇದರಿಂದ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ನದಿಗಳಿಗೆ ಮೈದುಂಬಿ ಹರಿಯುತ್ತಿರುವುದರಿಂದ ಜಲಪಾತಗಳು ಭೂರ್ಗರೆಯುತ್ತ ದುಮುಕುತ್ತಿವೆ. ಗೋವಾ ಮತ್ತು ಕರ್ನಾಟಕ  ಗಡಿಯಲ್ಲಿರುವ ಪಾಲಿ ಜಲಪಾ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಶಿಸುತ್ತಿದೆ.

ಹಿನ್ನೆಲೆಯಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಅಧಿಕ ಸಂಖ್ಯೆಯ ಜನರು ಪಾಲಿ ಜಲಪಾತ ವೀಕ್ಷಣೆಗೆ ಹೋಗುತ್ತಿದ್ದಾರೆ. ಅತಿಯಾಗಿ ನೀರು ಹರಿದು ಬರುತ್ತಿರುವುದರಿಂದ ಪಾಲಿ ಜಲಪಾತದ ಸುತ್ತ-ಮುತ್ತ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ವೀಕೆಂಡ್ ‌ಮಸ್ತಿಗಾಗಿ ಪಾಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಕರ್ನಾಟಕದ ಸುಮಾರು 50 ಮಂದಿ ಪ್ರವಾಸಿಗರು ಸೇರಿದಂತೆ ಗೋವಾ ಮತ್ತು ಮಹಾರಾಷ್ಟ್ರದ 150 ಜನ ಅಲ್ಲಿಯೇ ಸಿಲುಕಿಕೊಂಡಿದ್ದರು. ಮಳೆಯಿಂದ ಜಲಪಾತ ಮಾರ್ಗದ ರಸ್ತೆ ಸಂಪರ್ಕ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರವಾಸಿಗರು ಸಿಲುಕಿ ಹಾಕಿಕೊಂಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ, ಅಗ್ನಿಶಾಮಕ ಹಾಗೂ ಪೊಲೀಸರು 150 ಪ್ರವಾಸಿಗರನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕರೆತಂದಿದ್ದಾರೆ.

 

WhatsApp Group Join Now
Telegram Group Join Now
Share This Article