ಸಂಕೇಶ್ವರ : ಸಮೀಪದ ಬಾಪೂಜಿ ಎಜುಕೇಷನ್ ಸೊಸೈಟಿ(ಹುಕ್ಕೇರಿ) ವತಿಯಿಂದ “ಶಿಕ್ಷಕರ ತರಬೇತಿ ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿತ್ತು.
ಶನಿವಾರ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಂ. ಎನ್. ಉಪ್ಪಾರರವರು ಸೇರಿದಂತೆ ಇತರರು ಸಸಿಗೆ ನೀರ ಎರೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಗ್ರಾಮಗಳಾದ ಧೂಪದಾಳ, ಕುಲಗೋಡ, ಹೂಗಾರ ಖುರ್ದಾ, ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಭೋಧನ ತಂತ್ರಜ್ಞಾನಗಳು ಮತ್ತು ಶಿಕ್ಷಕರ ಉತ್ತಮ ಗುಣ ನಡತೆಗಳು, ಶಾಲಾ ನಿರ್ವಹಣೆ, ಮುಂತಾದ ವಿಷಯಗಳ ಬಗ್ಗೆ ತರಬೇತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುತ್ತಿದೆ.
ಸಮಾರಂಭದಲ್ಲಿ ಪ್ರಾಂಶುಪಾಲರಾದ ಮಿಥುನ್ ರಾಜ್ ,ಶಾಲಾ ನಿರ್ವಾಹಕರಾದ ಬಸವರಾಜ ಅಮ್ಮಣಗಿ ಮತ್ತು ಅರ್ಜುನ್ ಸಂಕನ್ನರವರು,ಲಕ್ಷ್ಮಿ ಸುಫೀಯಾ ಮತ್ತು ಬಾಪೂಜಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಿ. ಎ. ಪಾಟೀಲ್ ಉಪಸ್ಥಿತರಿದ್ದರು.ಉಪನ್ಯಾಸಕಿ ಕು. ಬಿಂದು ಆರ್. ಡಿ. ರಾಂಪುರ ನಿರೂಪಿಸಿ ವಂದಿಸಿದರು.