ಸರ್ಕಾರಿ ಅಧಿಕಾರಿಗಳು ಸಮನ್ವಯದಿಂದ ಕೇಲಸ ನಿರ್ವಹಿಸಿ: ಅಫ್ರೀನಾ ಬಳ್ಳಾರಿ

Ravi Talawar
 ಸರ್ಕಾರಿ ಅಧಿಕಾರಿಗಳು ಸಮನ್ವಯದಿಂದ ಕೇಲಸ ನಿರ್ವಹಿಸಿ: ಅಫ್ರೀನಾ ಬಳ್ಳಾರಿ
WhatsApp Group Join Now
Telegram Group Join Now
ಸರಕಾರಿ ಅಧಿಕಾರಿಗಳು ಸಮನ್ವಯದಿಂದ ಕೇಲಸ ನಿರ್ವಹಿಸಿದರೆ ಮಾತ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸ ಬಹುದು ಎಂದು ಬೆಳಗಾವಿ ಸ್ಮಾರ್ಟ ಸಿಟಿ ಎಂ ಡಿ ಮತ್ತು ಹುಕ್ಕೇರಿ ತಾಲೂಕಾ ನೋಡಲ್ ಅಧಿಕಾರಿ  ಅಫ್ರೀನಾ ಬಾನು ಬಳ್ಳಾರಿ ಹೇಳಿದರು .
ಅವರು ಇಂದು ಹುಕ್ಕೇರಿ ನಗರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡುತ್ತಾ ತಾಲೂಕಿನಲ್ಲಿ  ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನ ಗೋಳ್ಳಬೇಕು  ಮತ್ತು ವಿವಿಧ ವಸತಿ ನಿಲಯಗಳಲ್ಲಿಯ  ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವದು ಮತ್ತು ಸರ್ಕಾರದ ಯೋಜನೆಗಳನ್ನು ಫಲಾನಿಭವಿಗಳಿಗೆ ತಲುಪಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ ಕಾರಣ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯುತ ವಾಗಿ ಕೇಲಸ ನಿರ್ವಹಿಸಬೇಕು, ಮತ್ತು ಮಳೆಗಾಲದ ಸಮಯದಲ್ಲಿ ಪ್ರವಾಹ ಎದುರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಹೇಡ್ ಕ್ವಾಟರ್ಸ ದಲ್ಲಿ ವಾಸವಿದ್ದು ಯಮರ್ಜನ್ಸಿ ಫೋನ್ ಕಾಲ ರೀಸಿವ್ ಮಾಡಬೇಕು ಮತ್ತು ಪ್ಲಡ್ ಸಮರ್ಪಕವಾಗಿ ಎದುರುಸಲು ಸಿದ್ದರಿರಬೇಕು ಎಂದು ಸೂಚನೆ ನೀಡಿದರು.
ಶೀಶು ಅಭಿವೃದ್ಧಿ ಇಲಾಖೆಗಳ ಇಲಾಖೆಗಳ ಕಾರ್ಯ ವೈಕರ್ಯ ಕುರಿತು ಮಾಹಿತಿ ಪಡೆದು ಒಂದು ತಿಂಗಳ ವಳಗಾಗಿ ಸುಮಾರು 15 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಸೂಚನೆ ನೀಡಿದರು. ವೇದಿಕೆ ಮೇಲೆ ಗ್ರೇಡ ೨  ತಹಸಿಲ್ದಾರ ಪ್ರಕಾಶ ಕಲ್ಲೋಳಿ, , ಇಓ ಪ್ರವೀಣ ಕಟ್ಟಿ ಉಪಸ್ಥಿತರಿದರು.
ಈ ಸಂದರ್ಭದಲ್ಲಿ ಬಿ ಇ ಓ ಪ್ರಭಾವತಿ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಎಚ್ ಎ ಮಾಹುತ, ಹಿಂದುಳಿದ ವರ್ಗಗಳ ಅಧಿಕಾರಿ ಮಹಾಂತೇಶ ಊರವಳಗಿನ, ಅಕ್ಷರ ದಾಸೋಹ ನಿರ್ದೆಶಕಿ ಸವಿತಾ ಹಲಕಿ,  ಪುರಸಭೆ ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಕಂದಾಯ ಅಧಿಕಾರಿ ಸಾರಾಅಪೂರೆ,  ಅಭಿಯಂತರ ಕಾಂಬಳೆ ಮೊದಲಾದವರು ಹಾಜರಿದ್ದರು.
WhatsApp Group Join Now
Telegram Group Join Now
Share This Article