ರಾಯಬಾಗ: ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ಸ್ಥಾನವಹಿಸಿದೆ. ಸಹಕಾರ ಕ್ಷೇತ್ರ ಹೆಚ್ಚು ಬೆಳೆಯಬೇಕಾದರೆ ಎಲ್ಲರ ಸಹಕಾರ ಅಗ್ಯವಾಗಿ ಬೇಕು ಎಂದು ಡಾ.ಮಹಾಂತಪ್ರಭು ಮಹಾಸ್ವಾಮೀಜಿಗಳು ಹೇಳಿದರು.
ಸಮೀಪದ ಭಿರಡಿ ಗ್ರಾಮದಲ್ಲಿ ನಂದಿ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಂದ ರೈತರು ಅಭಿವೃದ್ಧಿಹೊಂದಲು ಸಾದ್ಯವಾಗುತ್ತದೆ. ರೈತರ ಕಷ್ಟಗಳ ಸಂದರ್ಭದಲ್ಲಿ ಸಹಕಾರ ಸಂಘದ ಲಾಭ ಪಡೆದುಕೊಂಡು ನಂತರ ಸರಿಯಾದ ಸಮಯಕ್ಕೆ ಮರಳಿಸಿದರೆ ಸಂಘ ಹಾಗೂ ರೈತರು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ನಂದಿ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಅಪ್ಪಾಸಾಬ ಕುಲಗುಡೆ, ಬಿಡಿಸಿಸಿ ಬ್ಯಾಂಕಿನ ಟಿಸಿಓ ಪಾಟೀಲ, ಬಿ ಐ ಬನಶಂಕರಿ, ಮುಖಂಡರಾದ ಧುಳಗೌಡ ಪಾಟೀಲ, ಸಂಘದ ಅಧ್ಯಕ್ಷ ಶಂಕರ ಗಡಕರಿ,ಶಿವಗೌಡ ನೀಡವನೆ,ರಾಮಚಂದ್ರ ನಿಶಾನದಾರ, ಮಹಾದೇವ ಬೋರಗಂವೆ, ಶ್ರೀಧರ ಕುಡಚೆ, ಪೂಜಾ ನೀಡವಣಿ,ಭಾರತ ಲಗೊಟೆ, ರಾಜು ಪಾಟೀಲ.ಸುರೇಶ ಬೆಂಡೆ, ರುದ್ರಪ್ಪ ಹೆಗಲೇ, ಅನಗೌಡಾ ಪಾಟೀಲ, ವಸಂತ ಗೆಣಾಣಿ ಹಾಗೂ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಪೋಟೋ
ಭಿರಡಿ ಗ್ರಾಮದಲ್ಲಿ ನಂದಿ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಉದ್ಘಾಟಿಸಿ ಡಾ.ಮಹಾಂತಪ್ರಭು ಮಹಾಸ್ವಾಮೀಜಿಗಳು ಹಾಗೂ ಗಣ್ಯರು.