ಸಿರಿಧಾನ್ಯ ಆಹಾರ ಬಳಕೆ, ಪೌಸ್ಟಿಕ ಆಹಾರ ಸೇವನೆ ಕಾರ್ಯಾಗಾರ

Ravi Talawar
ಸಿರಿಧಾನ್ಯ ಆಹಾರ ಬಳಕೆ, ಪೌಸ್ಟಿಕ ಆಹಾರ ಸೇವನೆ ಕಾರ್ಯಾಗಾರ
WhatsApp Group Join Now
Telegram Group Join Now
ನೇಸರಗಿ: ಸಮೀಪದ  ದೇಶನೂರ ವಲಯದ ಕೊಳದೂರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ   ಚಿಗುರು ಜ್ಞಾನ ವಿಕಾಸ ಕೇಂದ್ರದಲ್ಲಿ  ಪೌಷ್ಟಿಕ ಆಹಾರ  ಕಾರ್ಯಕ್ರಮದಲ್ಲಿ   ಸಿರಿಧಾನ್ಯ ಆಹಾರ ಬಳಕೆ ಮತ್ತು ಮಹತ್ವದ ಬಗ್ಗೆ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಹರಿಜನ  ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದ ಉದ್ಘಾಟಕರಾಗಿ   ಆಗಮಿಸಿದ   ಬಸನಗೌಡ  ಪಾಟೀಲ, ಕೇಂದ್ರದ ಅಧ್ಯಕ್ಷರಾದ ಭಾರತಿ ಮಾವಿನಕಟ್ಟಿ   ಇವರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು  ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ  ಪೌಷ್ಟಿಕ ಆಹಾರ ಹಾಗೂ ಸಿರಿಧಾನ್ಯಗಳ ಬಳಕೆಯಿಂದ ಆಗುವ ಉಪಯೋಗಗಳು ಹಾಗೂ  ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನ ಕುರಿತು ಮಾಹಿತಿ ನೀಡಿದರು ಜ್ಞಾನ ವಿಕಾಸ  ಕಾರ್ಯಕ್ರಮಗಳ ದ್ಯೇಯೋದ್ದೇಶಗಳು , ಸಿರಿ ಮಿಲಟ್ ಯೋಜನೆ ಹಾಗೂ ಗ್ರಾಮದಲ್ಲಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅನುಷ್ಠಾನಗಳ ಬಗ್ಗೆ   ಜ್ಞಾನ ವಿಕಾಸಸಮನ್ವಯಧಿಕಾರಿ ಶೈಲಾ ಜೆ   ಮಾಹಿತಿ ನೀಡಿದರು.  ಸೇವಾ ಪ್ರತಿನಿಧಿ ಲಕ್ಷ್ಮಿ  ಕೇಂದ್ರದ ಸದಸ್ಯರು  ಸಮ್ಮುಖದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಲಾಯಿತು.
WhatsApp Group Join Now
Telegram Group Join Now
Share This Article