ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸೋಣ

Ravi Talawar
ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸೋಣ
WhatsApp Group Join Now
Telegram Group Join Now
ನೇಸರಗಿ. ಇಲ್ಲಿನ ನೇಸರಗಿ  ವಲಯ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘದ ವತಿಯಿಂದ  ಹಾಗೂ ಗ್ರಾಮ ಪಂಚಾಯತ ಹಣಬರಹಟ್ಟಿ ಮತ್ತು ಅರಣ್ಯ ಇಲಾಖೆ ಸಹಬಾಗಿತ್ವದಲ್ಲಿ  ಸಮೀಪದ   ಹಣಬರಹಟ್ಟಿ ಕೆರೆಯ ಅಂಗಳದಲ್ಲಿ ಗಿಡ ನಾಟಿ ಮಾಡುವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಹಣಬರಹಟ್ಟಿಯ ರಾಮಲಿಂಗೇಶ್ವರ ಮಠದ ಬಸವ ಲಿಂಗ ಪಟ್ಟದೇವರು  ಗಿಡಕ್ಕೆ ನೀರು ಹಾಕುವುದರ ಮೂಲಕ ಹಾಗೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ  ಯೋಜನಾಧಿಕಾರಿಗಳು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಮಹತ್ವ ಹಾಗೂ ಅನುಪಾಲನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಹಣಬರಹಟ್ಟಿ ಪ್ರೌಢ  ಶಾಲೆಯ ವಿಜ್ಞಾನ ಶಿಕ್ಷಕರು  ಪರಿಸರ ಸಂರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡಬಹುದು ಹಸಿರೇ ಉಸಿರು ಎಂಬ ವೇದವಾಕ್ಯದ ಮೂಲಕ ಸಂರಕ್ಷಣೆಯ  ಬಗ್ಗೆ ಮಾಹಿತಿಯನ್ನು ತಿಳಿಸಿದರು. ಸಾಲುಮರದ ತಿಮ್ಮಕ್ಕನರವರ ಬಗ್ಗೆ ಮಾಹಿತಿ ನೀಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೂ ಹಾಗೂ ಗ್ರಾಮಸ್ಥರಿಗೂ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ಶಾಲೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಮತ್ತು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘದ  ಸೇವಾ ಪ್ರತಿನಿದಿಗಳು  ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article