ವಿಜಯನಗರ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿÀ ಶ್ರೀ ತರಳಬಾಳು ಜಗದ್ಗುರು ಶಾಖಾಮಠದಿಂದ ಹಮ್ಮಿಕೊಂಡಿರುವ ವಚನ ಕಮ್ಮಟದಲ್ಲಿ ಹೊಸಪೇಟೆ ತಾಲೂಕಿನ ಇಪ್ಪಿತ್ತೇರಿ ಮಾಗಾಣಿಯ ಶ್ರೀ ಉಕ್ಕಡಗಾತ್ರಿ ಅಜ್ಜಯ್ಯ ಮಠದ ಮಾತಾ ಅನುರಾಧೇಶ್ವರಿ ಅಮ್ಮನವರು ಪಾಲ್ಗೊಂಡಿದ್ದಾರೆ.
ಧರ್ಮ, ಸಮಾಜ, ಮಠ ಮತ್ತು ಸಂಸ್ಕøತಿ ಕುರಿತಂತೆ ಮಠಾಧೀಶರು ಮತ್ತು ಮಠಾಧೀಶರ ಉತ್ತರಾಧಿಕಾರಿಗಳಿಗಾಗಿ ಈ ವಚನ ಕಮ್ಮಟ ಆಯೋಜಿಸಲಾಗಿದೆ. ಜು.1ರಿಂದ 5ರವರೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ನಾಡಿನ ಹಲವಾರು ಮಠಾಧೀಶರು ಪಾಲ್ಗೊಂಡಿದ್ದಾರೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಪ್ರತಿನಿತ್ಯ ಯೋಗಾಸನ, ಶಿವ ಧ್ವಜಾರೋಹಣ, ಶಿವ ಮಂತ್ರ ಲೇಖನ, ವಚನ ಗೀತೆ, ಇಷ್ಟಲಿಂಗ ಪೂಜೆ, ಗೋಷ್ಠಿಗಳು ಮತ್ತು ಸಂವಾದ, ಆಶೀರ್ವಚನ, ವಚನ ನೃತ್ಯರೂಪಕ, ನಾಟಕ ಪ್ರದರ್ಶನ ಜರುಗುತ್ತಿವೆ.
ಶ್ರೀ ಉಕ್ಕಡಗಾತ್ರಿ ಅಜ್ಜಯ್ಯನ ಮಠದ ಮಾತಾ ಅನುರಾಧೇಶ್ವರಿ ಅಮ್ಮನವರು ಹರ, ಗುರು, ಚರ, ಶರಣರ ಸಂಕಲ್ಪದಂತೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಲೋಕ ಕಲ್ಯಾಣ ಕಾರ್ಯ ಮುಂದುವರಿಸಿದ್ದಾರೆ.