ಶ್ರೀಧರಗಡ್ಡೆಯಲ್ಲಿ ಎರಡನೇ ಬಾರಿಗೆ ಅದ್ದೂರಿಯಾಗಿ ನಡೆದ ಕರ್ಣಾರ್ಜುನ ಕಾಳಗನ ಬೈಲಾಟ

Ravi Talawar
ಶ್ರೀಧರಗಡ್ಡೆಯಲ್ಲಿ ಎರಡನೇ ಬಾರಿಗೆ ಅದ್ದೂರಿಯಾಗಿ ನಡೆದ ಕರ್ಣಾರ್ಜುನ ಕಾಳಗನ ಬೈಲಾಟ
WhatsApp Group Join Now
Telegram Group Join Now
ಬಳ್ಳಾರಿ, ಜೂ.02 : ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ಎರಡನೇ ಬಾರಿಗೆ ಅದ್ದೂರಿಯಾಗಿ ಕರ್ಣಾರ್ಜುನ ಕಾಳಗ ಎಂಬ ಪೌರಾಣಿಕ ಬೈಲಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರತಿ ಗ್ರಾಮಗಳಲ್ಲಿ ಬೈಲಾಟ ಆಡುವುದರಿಂದ ಗ್ರಹಗತಿಗಳು ಮತ್ತು ಕಷ್ಟಗಳು ದೂರಾಗಿ ಮಳೆ ಬೆಳೆ ಚೆನ್ನಾಗಿ ಬರುತ್ತದೆ ಮತ್ತು ರೈತರ ಕಷ್ಟಗಳೆಲ್ಲ ದೂರಾಗುತ್ತವೆ ಎಂದು ಅಂದಿನ ಕಾಲದಿಂದ ನಡೆದುಕೊಂಡ ಬಂದ  ಸಂಪ್ರದಾಯ ಇದು  ಎಂದು ವೇದಿಕೆಯ ಮೇಲೆ ಹಿರಿಯರು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಿಗೆ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮದ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಯುವ ಮುಖಂಡ ಎಸ್.ಬಿ.ಅಶೋಕಪ್ಪ ಗೌಡವರು ಕರ್ಣಾರ್ಜುನನ ಕಾಳಗ ಎಂಬ ಬಯಲಾಟಕ್ಕೆ 50 ಸಾವಿರ ರೂಪಾಯಿಗಳನ್ನು ನೀಡಿ ಗ್ರಾಮದಲ್ಲಿ ಇನ್ನು ಹೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.
ಗ್ರಾಮದ ಮತ್ತೊಬ್ಬ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಬೈಲಾಟದ ಸ್ಟೇಜ್ ಮೆನೇಜರ್ ಆದ ಸಿದ್ರಾಮನಗೌಡ ಅವರು 20,000 ರೂಪಾಯಿಗಳನ್ನು ಮತ್ತು ಎಸ್.ಬಿ.ಈರನಗೌಡ ಅವರು 20,000 ರೂಪಾಯಿಗಳನ್ನು ಬಯಲಾಟ ಕಾರ್ಯಕ್ರಮಕ್ಕೆ ನೀಡಿ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಮರಿ ಕೊಟ್ಟೂರು ದೇಶಿಕರು ಶ್ರೀಧರಗಡ್ಡೆ, ವೀರಶೈವ ಲಿಂಗಾಯತ ಸಮಾಜ ಹಾಗೂ ವಿವಿಧ ಸಮುದಾಯದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು ಮತ್ತು ಊರಿನ ಹಿರಿಯರು ಭಾಗವಹಿಸಿದ್ದರು. ಈ ಬಯಲಾಟವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಹಿಸಿದ್ದರು.
WhatsApp Group Join Now
Telegram Group Join Now
Share This Article