ರೋಗದ ಚಿಕಿತ್ಸೆಗಿಂತ, ರೋಗ ತಡೆಗಟ್ಟುವವ ಆದರ್ಶ ವೈದ್ಯ : ಡಾ. ಭುವನೇಶ್ವರಿ ಯಳಮೇಲಿ

Ravi Talawar
ರೋಗದ ಚಿಕಿತ್ಸೆಗಿಂತ, ರೋಗ ತಡೆಗಟ್ಟುವವ ಆದರ್ಶ ವೈದ್ಯ : ಡಾ. ಭುವನೇಶ್ವರಿ ಯಳಮೇಲಿ
WhatsApp Group Join Now
Telegram Group Join Now

ಬಾಗಲಕೋಟೆ : ರೋಗದ ಚಿಕಿತ್ಸೆ ನೀಡುವುದರ ಜೋತೆಗೆ ರೋಗ ತಡಗಟ್ಟುವ ವೈದ್ಯರೆ ಆದರ್ಶ ವೈದ್ಯರು ಎಂದು ಎಸ್.ಎನ್.ವೈದ್ಯಕೀಯ ಮಹಾವಿದ್ಯಾಲಯದ ನೂತನ ಪ್ರಾಚಾರ್ಯ ಡಾ. ಭುವನೇಶ್ವರಿ ಯಳಮೇಲಿ ಹೇಳಿದರು.

ಅವರು ನಗರದ ಬಿ.ವ್ಹಿ.ವ್ಹಿ.ಎಸ್.ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಪ್ರಯುಕ್ತ  ಆಯೋಜಿಸಿದ ಸಮಾರಂಭದಲ್ಲಿ ಸಸಿಗೆ ನೀರುನಿಸುವ ಮೂಲಕ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.

ವೈದ್ಯರು ಭೂಮಿಯ ಮೇಲಿನ ದೇವರು, ಎಂಬ ಸ್ಥಾನವನ್ನು ನಾವು ಶ್ರದ್ಧೆ – ತಾಳ್ಮೆ – ಕರುಣೆಗಳಿಂದ ಉಳಿಸಿಕೊಂಡು ಹೋಗಬೇಕಾಗಿದೆ, ವೈದ್ಯರ ವೃತ್ತಿ ಗೌರವಯುತವಾಗಿದ್ದು, ಆದರ್ಶ ವೈದ್ಯರು ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವಿಕೆಗೆ ಗಮನ ನೀಡುತ್ತಾರೆ.

ವೈದ್ಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಅವಲಂಬಿಸದೇ ಪುಸ್ತಕಗಳನ್ನು ಓದಿ, ವೈದ್ಯ ಉಪನ್ಯಾಸಕರಿಂದ ಆಸ್ಪತ್ರೆಯಲ್ಲಿ ಮಾಹಿತಿ ಸಂಗ್ರಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರಲ್ಲದೆ, ವೈದ್ಯಕೀಯ ವೃತ್ತಿಯಲ್ಲಿ ಭಾರತ ರತ್ನ ಡಾ.ಬಿ.ಸಿ.ರಾಯ್ ರವರ ಹಾಗೆ ಸೇವೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ನಮ್ಮದಾಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ ವೈದ್ಯರು ದೇವರಲ್ಲ. ದೇವರ ಪ್ರತಿನಿಧಿಗಳು. ಜನರ ಆರೋಗ್ಯ ಕಾಪಾಡಿ ಆರೈಕೆ ಮೂಲಕ ಜೀವ ಉಳಿಸುವ ವೈದ್ಯ ವೃತ್ತಿ ಪವಿತ್ರವಾದುದು ಎಂದರು.

ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠವಾದದ್ದು ವೈದ್ಯ ವೃತ್ತಿ, ವೈದ್ಯರಾದವರಿಗೆ ಸಮರ್ಪಣೆ ತ್ಯಾಗ, ಸನ್ನಡತೆ , ಸಮಯ ಪ್ರಜ್ಞೆ ಅತ್ಯವಶ್ಯ.ವೈದ್ಯಕೀಯ ಸೇವೆಯಲ್ಲಿ ಈ ಭಾಗದ ಜನರಿಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಅನನ್ಯವಾದ ಶ್ರೇಷ್ಠ ಗುಣಮಟ್ಟದ ವೈದ್ಯಕೀಯ ಸೇವೆಯಿಂದ ಸಂಜೀವಿನಿಯಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠರ ಕೊಡುಗೆಯೂ ಅಪಾರ ಹಾಗೂ ಶ್ಲಾಘನೀಯ ಎಂದರು.

ವೈದ್ಯ ವಿದ್ಯಾಥಿ೯ನಿಯರಾದ ಕುಮಾರಿ ಅನ್ನಪೂರ್ಣ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಅಂಬಿಕಾ ಅವಟಿ ಸ್ವಾಗತಿಸಿದರು.ಕುಮಾರಿ ಶ್ವೇತಾ
ಸಜ್ಜನ ಪರಿಚಯಿಸಿದರು, ಕುಮಾರಿ ಯರ್ರ‍ಾ ಪಾವನಿ ವಂದಿಸಿದರು.ಕುಮಾರಿ ತನ್ವಿ ನುಗ್ಗಾನಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂಧರ್ಭರಲ್ಲಿ ನೂತನವಾಗಿ ಪದಗ್ರಹಣ ಮಾಡಿದ ಬಾಗಲಕೋಟೆಯ ಪ್ರತಿಷ್ಠಿತ ಬವಿವಿ ಸಂಘದ ಎಸ್.ಎನ್.ವೈದ್ಯಕೀಯ ಮಹಾವಿದ್ಯಾಲಯದ ನೂತನ ಪ್ರಾಚಾರ್ಯೆ ಡಾ. ಭುವನೇಶ್ವರಿ ಯಳಮೇಲಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಡಾ.ರವಿ.ಎಸ್. ಕೋಟೆಣ್ಣವರ. ಡಾ.ಅಮರೇಶ ಬಳಗಾನೂರ.ಡಾ.ವಿಜಯಲಕ್ಷ್ಮಿ  ಪಾಟೀಲ. ಡಾ.ರುದ್ರೇಶ ಕೊಪ್ಪಳ. ಡಾ.ವಿಜಯಲಕ್ಶ್ಮಿ ಪೂಜಾರ. ಡಾ.ಪ್ರದೀಪ .ಕೆ.ಎಸ್. ಉಪಸ್ಥಿತರಿದ್ದರು.

ಪೋಟೋ ೦೧ ಗರದ ಬಿ.ವ್ಹಿ.ವ್ಹಿ.ಎಸ್.ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಉದ್ಘಾಟನೆ.

WhatsApp Group Join Now
Telegram Group Join Now
Share This Article