ಕಲಾವಿದರ ಜೀವನವೇ ತ್ಯಾಗಮಯವಾಗಿದೆ :ಎ. ಎಚ್. ದೊಡ್ಡಮನಿ

Ravi Talawar
ಕಲಾವಿದರ ಜೀವನವೇ ತ್ಯಾಗಮಯವಾಗಿದೆ :ಎ. ಎಚ್. ದೊಡ್ಡಮನಿ
WhatsApp Group Join Now
Telegram Group Join Now

ಗದಗ ೨: ಕಲಾವಿದರ ಜೀವನವೇ ತ್ಯಾಗಮಯವಾಗಿದೆ ಎಂದು ಎ. ಎಚ್. ದೊಡ್ಡಮನಿಯವರ ಎಚ್. ದೊಡ್ಡಮನಿ ಗಾನಯೋಗಿ, ಶಿವಯೋಗಿ ಲಿಂ. ಪಂ.
ಪಂಚಾಕ್ಷರ ಗವಾಯಿಗಳವರ ಮತ್ತು ಲಿಂ. ಡಾ|| ಪಂ.  ಪುಟ್ಟರಾಜ ಕವಿ ಗವಾಯಿಗಳ ಉಭಯ ಗುರುಗಳ ಜಾತ್ರ ಮಹೋತ್ಸವ ಅಂಗವಾಗಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಇವರು ಸಂಗ್ರಹಿಸಿರುವ ವೃತ್ತಿರಂಗಭೂಮಿ ಕಲಾವಿದರ ಅಪರೂಪದ ಛಾಯಾಚಿತ್ರ ಹಾಗೂ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಹಳೆಯ ಲೇಖನಗಳ ೭೬ನೇ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ರಂಗ ಕಲಾವಿದರು ಜೀವನದುದ್ದಕ್ಕೂ ಕಲಾಸೇವೆ ಮಾಡುತ್ತಿರುವುದು ಅದ್ಭುತವಾಗಿದೆ ಕಲೆ ದೇವರ ಸಮಾನ. ಇಲ್ಲಿ ಯಾವುದೇ ಜಾತಿ, ಮತ ಮತ್ತು ಪಂಗಡಗಳಿಗೆ ಬೇಧವಿಲ್ಲ ಕಲಾಸೇವೆ ಸಲ್ಲಿಸುತ್ತಿರುವ ಕಲಾವಿದರಿಗೆ ಶುಭ ಕೋರುತ್ತೇನೆ. ದೇವರು ಸರ್ವರಿಗೂ ಕಲಾಸೇವೆ ಸಲ್ಲಿಸಲು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ನಾಟಕ ಅಕಾಡೆಮಿ ಸದಸ್ಯರಾದ ಜೇವರ್ಗಿ  ರಾಜಣ್ಣ, ರಾಜಕೀಯ ಧುರೀಣರಾದ ಬ್ಯಾಡಗಿಯ ಮುರಿಗೆಪ್ಪ ಶೆಟ್ಟರ್, ಕಲಾಪೋಷಕರಾದ ಸಿ. ಎಸ್. ಹಿರೇಮಠ, ರಂಗಕವಿಗಳಾದ

ಸಂಗಮೇಶ ಗೊರವ, ಕಲಾವಿದರಾದ ರೇವಣಸಿದ್ದಯ್ಯ ನೂಲ್ವಿ, ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕರು, ಶಿಕ್ಷಕರು, ರಂಗಕಲಾವಿದರು ಹಾಗೂ ಸಂಗೀತ ಕಲಾವಿದರು ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಎಲ್ಲ ಕಡೆ ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

WhatsApp Group Join Now
Telegram Group Join Now
Share This Article