ರಾಹುಲ್ ರಾಷ್ಟ್ರದ ಕ್ಷಮೆ ಯಾಚಿಸಬೇಕು: ಸಿ.ಟಿ.ರವಿ ಆಕ್ರೋಶ

Ravi Talawar
ರಾಹುಲ್ ರಾಷ್ಟ್ರದ ಕ್ಷಮೆ ಯಾಚಿಸಬೇಕು: ಸಿ.ಟಿ.ರವಿ ಆಕ್ರೋಶ
WhatsApp Group Join Now
Telegram Group Join Now

ಚಿಕ್ಕಮಗಳೂರು: ಲೋಕಸಭಾ ಕಲಾಪದಲ್ಲಿ ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನು ಪ್ರದರ್ಶನ ಮಾಡಿದ್ದಾರೆ. ಪ್ರತಿಪಕ್ಷ ನಾಯಕನೆನ್ನುವ ಜವಾಬ್ದಾರಿ ಮರೆತಿದ್ದಾರೆ” ಎಂದು ಅವರು ಟೀಕಿಸಿದರು.

“ಹಿಂದೂ ಅಂತ ಹೇಳುವವರು ದ್ವೇಷ ಭಾವನೆ ಬಿತ್ತುವವರು ಎಂಬ ಆರೋಪ ಮಾಡಿದ್ದಾರೆ. ಹಿಂದೂ ಎನ್ನುವುದು ಸರ್ವೇ ಜನಾಃ ಸುಖಿನೋ ಭವಂತು ಎಂಬುದನ್ನು ಪ್ರತಿಪಾದಿಸಿದೆ. ಹಿಂದೂ ಎನ್ನುವುದು ವಿಶ್ವ ಒಂದು ಕುಟುಂಬ ಅಂತ ಭಾವಿಸುವುದು, ಹಿಂದೂ ಎನ್ನುವುದು ಅಣುರೇಣು ತೃಣ ಕಾಷ್ಟಗಳಲ್ಲೂ ಭಗವಂತನನ್ನು ಕಾಣುವುದು, ಹಿಂದೂ ಎಂದರೆ ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿ, ಪಕ್ಷಿಗಳೂ ಚೆನ್ನಾಗಿರಬೇಕೆಂದು ಪ್ರಾರ್ಥಿಸುವುದು” ಎಂದು ಹೇಳಿದರು.

ಮುಂದುವರೆದು, “ರಾಹುಲ್ ಅವರು ಚೊಚ್ಚಲ ಭಾಷಣದಲ್ಲಿಯೇ ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ. ನನಗೆ ಭಾರತ, ಭಾರತೀಯತೆ, ಹಿಂದೂ, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎನ್ನುವುದನ್ನು ಪ್ರದರ್ಶಿಸಿದ್ದಾರೆ. ಸಹಸ್ರಾರು ವರ್ಷದ ಸನಾತನ ಪರಂಪರಗೆ ಅಪಮಾನದ ಕೆಲಸ ಮಾಡಿರುವ ಅವರು ರಾಷ್ಟ್ರದ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article